ಶುಕ್ರವಾರ, ಜುಲೈ 31, 2009

ವಿದೇಶ ಪ್ರವಾಸಕ್ಕೆ ಶುಭಹಾರೈಕೆ





ಅರಕಲಗೂಡು ತಾಲ್ಲೂಕಿನ ಜನಪ್ರಿಯ ಶಾಸಕರು ಮತ್ತು ಹಾಸನ ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷರು ಆದ ಶ್ರೀ ಎ. ಮಂಜು ರವರ ಆಸ್ಟ್ರೇಲಿಯಾ ಮತ್ತಿತರ ರಾಷ್ಟ್ರಗಳಿಗೆ ದಿನಾಂಕ 29-07-2009 ತೆರಳಿರುತ್ತಾರೆ, ವಿದೇಶ ಪ್ರವಾಸ ತೆರಳುತ್ತಿರುವ ಈ
ಸಂಧರ್ಭದಲ್ಲಿ ಸುಖಕರ ಪ್ರಯಾಣಕ್ಕೆ ಶುಭಹಾರೈಸುವ

ಚಿತ್ರ 1. ನಂದಕುಮಾರ್ (ಗಹನ)
ಶಾಸಕರ ಆಪ್ತ ಸಹಾಯಕರು
2. ಎ. ಸಿ. ರಮೇಶ್ (ಎಸಿಆರ್)
ಅರಕಲಗೂಡು
3. ಸನ್ಮಾನ್ಯ ಶ್ರೀ ಎ. ಮಂಜು ರವರು


ಶುಕ್ರವಾರ, ಜುಲೈ 24, 2009

ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಇದು ಕಟ್ಟೆಪುರ ಕಟ್ಟೆಯ ಕರ್ಮಕಾಂಡ





1.ಕೃಷ್ಣರಾಜಕಟ್ಟೆಯ ಬಲದಂಡೆ ನಾಲೆಯ ಬಳಿ ಗೋಡೆ ಕುಸಿದು ನೀರು ಹರಿಯುತ್ತಿರುವುದು

2.ಅರಕಲಗೂಡು ತಾಲೂಕಿನ ಕೃಷ್ಣರಾಜ ಕಟ್ಟೆಯ ತಡೆಬಾಗಿಲುಗಳು ನಾಶಹೊಂದಿದ ಪರಿಣಾಮ ನುಗ್ಗುತ್ತಿರುವ ನೀರು
3. ಕೃಷ್ಣರಾಜಕಟ್ಟೆಯ ಕಟ್ಟೆಪುರ ಎಡದಂಡೆಬಳಿ ಎರಡು ಗೇಟುಗಳು ಮುರಿದ ಪರಿಣಾಮ ಹೊರಬರುತ್ತಿರುವ ನೀರು
4. ಕೃಷ್ಣರಾಜ ಕದಟ್ಟೆಯ ಬಲದಂಡೆ ಜಾಕ್ ವೆಲ್ ಬಳಿ ಅಳವಡಿಸಲಾಗಿರುವ 4ಹೊಸಗೇಟ್ ಗಳು ಕಿತ್ತು ಬಂದಿರುವುದು
5. 2ತಿಂಗಳ ಹಿಂದೆ ಗೇಟ್ ಅಳವಡಿಸುವಾಗ ಸಮರ್ಪಕ ಕಾಮಗಾರಿ ಮಾಡದೇ ಕಿತ್ತುಹೋದ ಗೇಟ್ ಹಾಗು ತುಕ್ಕು ಹಿಡಿದಿರುವುದು.

ಳೆದ ವಾರ ಅರಕಲಗೂಡು ತಾಲೂಕಿನ ಕಟ್ಟೆಪುರ ಗ್ರಾಮದಲ್ಲಿರುವ ಕೃಷ್ಣರಾಜ ಕಟ್ಟೆಗೆ ಏಕಾಏಕಿ 9ಸಾವಿರ ಕ್ಯೂಸೆಕ್ಸ ನೀರು ಹರಿದು ಬಂದ ಪರಿಣಾಮ ಕಟ್ಟೆಯ 2ಬದಿ ಅಳವಡಿಸಲಾಗಿರುವ 18ಜಾಕ್ವೆಲ್ ಬಾಗಿಲುಗಳ ಪೈಕಿ 6ಬಾಗಿಲುಗಳು ಮುರಿದಿವೆ ಮತ್ತು ತೆರೆಯಲು ಆಗದ ಸ್ಥಿತಿಯಲ್ಲಿ ಮಡಚಿಕೊಂಡಿವೆ. ಪರಿಣಾಮ ರೈತರ ಬೆಳೆಗಳಿಗೆ ಸಂಗ್ರಹಿಸಲಾಗುತ್ತಿದ್ದ ಸಾವಿರಾರು ಕ್ಯೂಸೆಕ್ಸ ನೀರು ಪೋಲಾಗುತ್ತಿದೆ. ಇದರಿಂದಾಗಿ ಈ ಬಾಗದಲ್ಲಿ ಶುಂಠಿ ಹಾಗೂ ತೋಟದ ನೂರಾರು ಎಕರೆ ಬೆಳೆ ನೆರೆಯಹಾವಳಿಗೆ ತುತ್ತಾಗಿದೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಅಧಿಕೃತ ಮಾಹಿತಿಗಳೊಂದಿಗೆ ಪತ್ರಿಕೆ ವರದಿ ಪ್ರಕಟಿಸಿತ್ತು. ಆದರೆ ಹಾರಂಗಿ ಜಲಾಶಯ ಯೋಜನೆಯ ಅಧಿಕಾರಿಗಳು ಇಲ್ಲಿನ ಕಾಮಗಾರಿಗಳಲ್ಲಿ ಎಸಗಿರುವ ತಪ್ಪು ಮತ್ತು ಕಳಪೆ ಕಾಮಗಾರಿ ನಿರ್ವಹಣೆ ಬಯಲಿಗೆ ಬಂದಿತೆನ್ನುವ ಭಯಕ್ಕೆ ಬಿದ್ದು ತರಾತುರಿಯಲ್ಲಿ ಪತ್ರಿಕಾಹೇಳಿಕೆ ನೀಡಿ ಪತ್ರಿಕೆಯ ವರದಿಯನ್ನು ಅಲ್ಲಗೆಳೆದಿತ್ತು. ಆದರೆ ಸಾರ್ವಜನಿಕರಿಗೆ ವಿಶ್ವಾಸಾರ್ಹ ಮಾಹಿತಿ ಒದಗಿಸುವ ದೃಷ್ಠಿಯಿಂದ ಪತ್ರಿಕೆ ಮತ್ತೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿ ಈ ವರದಿ ನೀಡಿದೆ. ಕಳೆದ ಎರಡು ತಿಂಗಳ ಹಿಂದೆಯಷ್ಟೆ ಹಳೆಯ ಜಾಕ್ವೆಲ್ ಬಾಗಿಲುಗಳನ್ನು ತೆಗೆದು 18ಹೊಸ ಬಾಗಿಲುಗಳನ್ನು ಅಳವಡಿಸಿರುವ ಅಧಿಕಾರಿಗಳು ಕಳಪೆಯಾಗಿ ಕಾಮಗಾರಿ ನಿರ್ವಹಿಸಿದ ಪರಿಣಾಮ ಬಾಗಿಲು ಗಳು ಹಾನಿಗೊಳಗಾಗಿವೆ ಮತ್ತು ಕಟ್ಟೆಯ ಬಲದಂಡೆ ಬಳಿ ಕಟ್ಟಡವೇ ಕಿತ್ತುಹೋಗಿದೆ, ಎಡದಂಡೆ ಬಳಿ ನೀರು ಸೋರಿಕೆಯಾಗುತ್ತಿದೆ. ಮಳೆ ಹೆಚ್ಚಿನ ಪ್ರಮಾಣದಲ್ಲಿ ಬಿದ್ದರೆ ಕಟ್ಟೆ ಅಪಾಯಕ್ಕೆ ಸಿಲುಕುವ ಪರಿಸ್ಥಿತಿ ಇದೆ. ಜಿಲ್ಲಾಧಿಕಾರಿಗಳು ಹಾರಂಗಿ ಜಲಾಶಯದ ಅಧಿಕಾರಿಗಳ ವರದಿಯನ್ನು ನೆಚ್ಚಿ ಕೂರದೇ ಸ್ಥಳಕ್ಕೆ ಭೇಟಿ ನೀಡಿದರೆ ವಾಸ್ತವ ಪರಿಸ್ಥಿತಿ ಅರಿಯಬಹುದು.




























































ಭಾನುವಾರ, ಜುಲೈ 19, 2009

ಬಾ ಮಳೆಯೇ ಬಾ....

ರಾಜ್ಯದ ವಿವಿದೆಡೆ ಸಮೃದ್ಧವಾಗಿ ಮಳೆಯಾಗುತ್ತಿದೆ. ಈ ಬಾರಿ ಮುಂಗಾರು ತಡವಾಗಿ ಆರಂಭವಾದರೂ ದಿನದಿಂದ ದಿನಕ್ಕೆ ಪಡೆದುಕೊಂಡ ಬಿರುಸು, ರಾಜ್ಯದ ಪ್ರಮುಖ ಜಲಾಶಯಗಳು ಮೈದುಂಬಿಕೊಳ್ಳಲು ಕಾರಣವಾಗಿದೆ. ಮುಂಗಾರು ತಡವಾದಾಗ ಅಲ್ಲಲ್ಲಿ ರೈತರ ಬೆಳೆಗಳಿಗೆ ರೋಗ ರುಜಿನ ತಗುಲುವ ಬೀತಿಯ ಜೊತೆಗೆ, ಬೆಳೆ ಒಣಗಿ ಹೋಗುವ ಸ್ಥಿತಿ ಸೃಷ್ಠಿಯಾಗಿತ್ತು. ಮುಂಗಾರು ಆರಂಬದ ಮುನ್ನ ದಿನಗಳ ಬಿಸಿಲ ತೀವ್ರತೆಯೂ ಸಹಾ ದಕ್ಷಿಣದ ಜಿಲ್ಲೆಗಳಲ್ಲಿ ಹಿಂದಿಗಿಂತ ಹೆಚ್ಚಾಗಿತ್ತು. ಮುಂದೇನೋ ಎಂದು ರೈತ ಇಲ್ಲಿ ಕೈ ಹೊತ್ತು ಕುಳಿತಿದ್ದರೆ, ಮುಂದಿನ ಪರಿಸ್ಥಿತಿ ಏನು? ಬಿತ್ತನೆ ಬೀಜ, ರಸಗೊಬ್ಬರ,ವಿದ್ಯುತ್ಕೊರತೆ ಬರಲಿರುವ ದಿನಗಳಿಗೆ ಹೇಗೆ ಸಜ್ಜಾಗಬೇಕು? ಎಂದು ಚಿಂತಿಸದೇ ಹೊಣೆಗೇಡಿ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಸಂಪುಟ ದರ್ಜೆ ಸಚಿವರು ಮಳೆಯ ಬಗೆಗೆ, ವಿದ್ಯುತ್ತಿನ ಬಗ್ಗೆ ದಿನಕ್ಕೊಂದು ಬಗೆಯ ಹೇಳಿಕೆಗಳನ್ನು ನೀಡುತ್ತಾ ಸಾರ್ವಜನಿಕ ಪ್ರಹಸನ ಆರಂಭಿಸಿದ್ದರು. ಸಿಎಂ ಯಡ್ಡಿಯೂರಪ್ಪ ತಿರುಪತಿಗೆ, ಚೆನ್ನೈ ಗೆ ಮಳೆಗಾಗಿ ಪ್ರಾರ್ಥಿಸಲು ಹೋಗಿದ್ದರು.! ಇನ್ನು ಒಂದು ಹೆಜ್ಜೆ ಮುಂದೆ ಹೋದ ಮೂರ್ಖರು ಸಾರ್ವಜನಿಕರ ತೆರಿಗೆ ಹಣದಲ್ಲಿ ಅನಾಮತ್ತು 33ಲಕ್ಷರೂಪಾಯಿಗಳನ್ನು ರಾಜ್ಯದ ವಿವಿಧ ದೇಗುಲಗಳಲ್ಲಿ ಮಳೆಗಾಗಿ ಪ್ರಾರ್ಥಿಸಲು ವೆಚ್ಚ ಮಾಡಿದರು..! ಕರೆಂಟ್ ಮಂತ್ರಿ ವಿದ್ಯುತ್ ಕಡಿತದ ಬಗ್ಗೆ ಒಂದು ಸ್ಪಷ್ಟ ನಿಲುವು ಪ್ರಕಟಿಸಲಾರದೇ ಹೋದರು. ಪರಿಣಾಮ ಜನ ಅನಿಯಮಿತ ವಿದ್ಯುತ್ ಕಡಿತದಿಂದ ತೊಂದರೆ ಪಡುವಂತಾಯಿತು. ಅಂತೂ ಇಂತೂ ಮುಂಗಾರು ಮಳೆ ಬಂತು ಇವರು ಬಚಾವಾದರು. ಇವರ ಮಂಗಾಟ ಇದೇ ಮೊದಲಲ್ಲ,ಸರ್ಕಾರದ ರಚನೆಯಾದಾಗ ಮುಜುರಾಯಿ ದೇಗುಲಗಳಲ್ಲಿ ಸಿಎಂ ಯಡಿಯೂರಪ್ಪನ ಹೆಸರಿನಲ್ಲಿ ಪ್ರಥಮ ಪೂಜೆ ಸಲ್ಲಿಸುವ ಪ್ರಸ್ತಾಪ ಮಾಡಿ ಮುಜುಗುರ ಅನುಭವಿಸಿದ್ದರು, ನಂತರ ತಿರುಪತಿ ಲಡ್ಡುಗಳನ್ನು ತಂದು ಹಂಚುವ ಕೆಲಸ ಮಾಡಿದರು, ಶಿವರಾತ್ರಿ ಸಂಧರ್ಭದಲ್ಲಿ ಗಂಗಾಜಲವನ್ನು ತಂದು ದೇಗುಲಗಳಿಗೆ ನೀಡಿದರು..! ಇಂತಹ ಮಹಾನ್ ಕಾರ್ಯಗಳಿಂದ ಸಾರ್ವಜನಿಕರಿಗೆ ಆದ ಪ್ರಯೋಜನವೇನು? ಈ ಯೋಜನೆಗಳಿಗೆ ಖಜಾನೆಯಿಂದ ಸಾರ್ವಜನಿಕರ ಎಷ್ಟು ಕೋಟಿ ಹಣ ವೆಚ್ಚವಾಗಿದೆ ಎಂಬುದು ಈಗ ಚರ್ಚೆಯಾಗ ಬೇಕಾಗಿದೆ. ರಾಜ್ಯದಲ್ಲಿ ಮುಜುರಾಯಿಗೆ ಸೇರಿದ ಸಾವಿರಾರು ದೇಗುಲಗಳಿವೆ, ಅವುಗಳ ಜೀರ್ಣೊದ್ದಾರಕ್ಕೆ, ಅದನ್ನು ನೋಡಿಕೊಳ್ಳುವ ಅರ್ಚಕರು, ಪಾರುಪತ್ತೆಗಾರರುಗಳಿಗೆ ಸರಿಯಾದ್ದೊಂದು ದಾರಿ ಮಾಡುವ ಯೋಗ್ಯತೆ ಇಲ್ಲದ ಈ ಸರ್ಕಾರಕ್ಕೆ ಲಾಡು, ಗಂಗಾಜಲ, ಮಳೆಪೂಜೆ ಇವೆಲ್ಲಾ ಬೇಕಾ? ಕಳೆದ ಬಾರಿ ಉತ್ತರ ಕರ್ನಾಟಕದಲ್ಲಿ ತೊಗರಿಗೆ ನಿಗದಿತವಾದ ಬೆಂಬಲ ಬೆಲೆ ಸಿಗಲಿಲ್ಲ, ಹಾಸನ ಜಿಲ್ಲೆಯ ರೈತ ಬೆಳೆದ 100ಕೋಟಿಗೂ ಹೆಚ್ಚು ಮೊತ್ತದ 40ಸಾವಿರ ಹೆಕ್ಟೇರುಗಳಲ್ಲಿ ಬೆಳೆದ ಬೆಳೆ ಹಾಳಾಯ್ತು, ರಾಜ್ಯಾಧ್ಯಂತ ರಸಗೊಬ್ಬರದ ಸಮಸ್ಯೆ ಉಲ್ಭಣಿಸಿತ್ತು, ಹೇಳುವವರು, ಕೇಳುವವರಿಲ್ಲದೇ ಅನಾಥನಾದ ರೈತ ಕಣ್ಣೀರಿಟ್ಟ, ಹತಾಶನಾಗಿ ನೇಣಿಗೆ ಶರಣಾದ ಈ ಬಗ್ಗೆ ಕಿಂಚಿತ್ತ ಕಾಳಜಿ ವಹಿಸದ ಸರ್ಕಾರ ಯಾತಕ್ಕೂ ಬೇಡದ ಯೋಜನೆಗಳನ್ನು ಪ್ರಕಟಿಸುತ್ತಾ ಜನರನ್ನು ವಂಚಿಸಿದೆ, ಕಳೆದ ಎರಡು ಸರ್ಕಾರಗಳಲ್ಲಿ ಬಿತ್ತನೆ ಗೊಬ್ಬರಕ್ಕೆ ಹೆಚ್ಚಿನ ರಿಯಾಯ್ತಿ ಇತ್ತು ಈ ಭಾರಿ ಅದು ಶೇ.25ಕ್ಕೆ ಇಳಿದಿದೆ, ಎತ್ತು ಗಾಡಿ ಯೋಜನೆ ಎಕ್ಕ ಎದ್ದು ಹೋಗಿದೆ. ಹೀಗೆ ವಾಸ್ತವ ನೆಲೆಗಟ್ಟಿನಲ್ಲಿ ಚರ್ಚೆಯಾದಗೆಲ್ಲ ಕೇಂದ್ರದ ಕಡೆಗೆ ಬೊಟ್ಟು ಮಾಡಿ ತೋರುವ ಚಾಳಿ ಬೆಳೆಸಿಕೊಂಡಿರುವ ರಾಜ್ಯ ಸರ್ಕಾರ ತನ್ನಲ್ಲಿ ಒಂದು ಗುಪ್ತಚರ ಇಲಾಖೆ ಇದೆ, ತನ್ನ ರಾಜ್ಯದ ರೈತರಿಗೆ ಯಾವ ಗೊಬ್ಬರ ಬೇಕು, ಯಾವಾಗ ಬೇಕು? ಎಂದೆಲ್ಲ ಯೋಚಿಸಿದ್ದರೆ ಸಮಸ್ಯೆ ನಿಬಾಯಿಸುವುದು ಯಾವುದೆ ಸರ್ಕಾರಕ್ಕೂ ಕಷ್ಠ ಸಾಧ್ಯವಲ್ಲ. ಈಗ ಸದನ ಕಲಾಪಗಳು ನಡೆಯಲಾರಂಭಿಸಿವೆ, ಮಾನ್ಯ ಚುನಾಯಿತ ಮಹನೀಯರುಗಳೇ ಸದನದಲ್ಲಿ ಈ ವಿಚಾರ ಚರ್ಚೆಯಾಗಲಿ.
ಇರಲಿ ಹಾಸನ ಜಿಲ್ಲೆ ಈಗ ರಾಜಕೀಯ ಅಸ್ಪೃಶ್ಯತೆಯನ್ನು ಎದುರಿಸುತ್ತಿದೆ, ಎಲ್ಲ ವಿಚಾರಗಳಲ್ಲು ಹಾಳು ರಾಜಕೀಯ ಮುಂದು ಮಾಡಿಕೊಂಡು ಸಾರ್ವಜನಿಕವಾದ, ಅವಶ್ಯಕವಾದ ಅಬಿವೃದ್ದಿ ಕೆಲಸಗಳಿಗೆ ಸಿ ಎಂ ಯಡಿಯೂರಪ್ಪ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ, ಇದು ಕೃಷಿ ಪ್ರಧಾನ ಜಿಲ್ಲೆ , ಆರ್ಥಿಕ ವಲಯದಲ್ಲಿ ಬರುವ ಪ್ರಮುಖ ಜಿಲ್ಲೆ ಹಾಗಿದ್ದಾಗ್ಯೂ ಇಲ್ಲಿನ ಜನರ ನೋವಿಗೆ ದನಿಯಾಗದ ಯಡಿಯೂರಪ್ಪ ಜಿಲ್ಲೆಯ ಜನರನ್ನು ನೋಡಲು ಬಂದಿದ್ದು ಮತಯಾಚನೆಗೆ ಮಾತ್ರ. ಚುನಾವಣೆಗಳಲ್ಲಿ ಜಿಲ್ಲೆಯ ಜನತೆ ಬೇರೆ ರಾಜಕೀಯ ಪಕ್ಷಗಳಿಗೆ ತೋರಿದಷ್ಟೇ ಆದರವನ್ನು ಬಿಜೆಪಿಗೂ ತೋರಿದ್ದಾರೆ. ಹಾಗಿದ್ದಾಗ್ಯೂ ಯಡಿಯೂರಪ್ಪ ಮಲತಾಯಿ ಧೋರಣೆ ತೋರಬಹುದೇ. ಸರ್ಕಾರ ರಚನೆಯಾಗಿ ಒಂದೂವರೆ ವರ್ಷವಾಗಿದೆ ಜಿಲ್ಲೆಗೆ ನೇಮಕವಾದ ಉಸ್ತುವಾರಿ ಸಚಿವರೇ ನಾಪತ್ತೆಯಾಗಿದ್ದಾರೆ..! ಜಿಲ್ಲೆಯಲ್ಲಿ ಅಧಿಕಾರಿಗಳದ್ದೇ ದರ್ಬಾರು, ಯಾವ ಅಭಿವೃದ್ದಿ ಕೆಲಸವಾಗಬೇಕು, ನಡೆಯುತ್ತಿರುವ ಕೆಲಸ ಯಾವ ಹಂತದಲ್ಲಿದೆ, ಏನು ಅಡಚಣೆಯಾಗಿದೆ, ಜಿಲ್ಲೆಯ ಜನರ ಸಂಕಷ್ಟಗಳೇನು?ಅವರ ನಿರೀಕ್ಷೆಗಳೇನು ಕೇಳಿಸಿಕೊಳ್ಳುವವರು ಯಾರು ಸ್ವಾಮಿ? ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಈ ನಿಟ್ಟಿನಲ್ಲಿ ಸದನದಲ್ಲಿ ಏನು ಮಾಡುತ್ತಾರೋ ಕಾದು ನೋಡಬೇಕು. ಒಂದು ವೇಳೆ ಅಲ್ಲಿಯೂ ಜಿಲ್ಲೆಯ ಶಾಸಕರುಗಳು ಅಸ್ಪೃಶ್ಯತೆ ಅನುಭವಿಸಿದರೆ ಅದು ಜಿಲ್ಲೆಯ ಜನತೆಗೆ ಶಾಪವೇ...
ಜಿಲ್ಲೆಯ ಯಗಚಿ, ಹೇಮಾವತಿ, ವಾಟೆಹೊಳೆ ಅಣೆಕಟ್ಟೆಯ ಜೊತೆಜೊತೆಗೆ ಕಾವೇರಿ ನದಿಯ ಮೊದಲ ಕಟ್ಟೆ ಎಂದೇ ಹೆಸರಾಗಿರುವ ಕಟ್ಟೇಪುರ ಕಟ್ಟೆ ಭೋರ್ಗರೆದು ಹರಿಯುತ್ತಿವೆ. ಸ್ವಲ್ಪ ಪ್ರಮಾಣದಲ್ಲಿ ಬಿತ್ತನೆಯಾಗಿರುವ ಆಲೂಗಡ್ಡೆ ಯಥಾಪ್ರಕಾರ ರೋಗಕ್ಕೆ ತುತ್ತಾಗಿದೆ, ಉಳಿದಂತೆ ಅಡಿಕೆ,ತಂಬಾಕು, ಹೂವು, ತರಕಾರಿ ಬೆಳೆಗಳು, ಭತ್ತ, ಜೋಳ ಇತ್ಯಾದಿ ಉತ್ತಮವಾಗಿದೆ. ಸಧ್ಯ ಜಿಲ್ಲೆಯಲ್ಲಿ ಗೊಬ್ಬರ ಸಮಸ್ಯೆಯಾಗಿಲ್ಲ. ಅಷ್ಟರಮಟ್ಟಿಗೆ ರೈತ ಸಂತಸದಲ್ಲಿದ್ದಾನೆ.

ಮಂಗಳವಾರ, ಜುಲೈ 14, 2009

ತಂಬಾಕು ಬಂಪರ್ ಬೆಳೆ: ಇಮ್ಮುಡಿಯಾದ ರೈತರ ಉತ್ಸಾಹ



(ವಿಶೇಷ ವರದಿ) ಸಿ . ಜಯಕುಮಾರ್



ತಂಬಾಕು ಬೆಳೆಗಾರರು ಈ ಬಾರಿ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಕಳೆದ 2ವರ್ಷಗಳಿಂದ ಈ ಭಾಗದಲ್ಲಿ ಬೆಳೆಯುವ ತಂಬಾಕಿಗೆ ಮಾರುಕಟ್ಟೆಯಲ್ಲಿ ನಿರೀಕ್ಷಿತ ಧಾರಣೆಗಿಂತ ಹೆಚ್ಚಿನ ಧಾರಣೆ ದೊರೆತಿರುವುದು ರೈತರ ಉತ್ಸಾಹವನ್ನು ಇಮ್ಮುಡಿಸುವಂತೆ ಮಾಡಿದೆ. ಇಲ್ಲಿನ ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯಲ್ಲಿ 2007ರಲ್ಲಿ ೧೭.5ಮಿಲಿಯನ್ ತಂಬಾಕು ಮಾರಾಟವಾಗಿದ್ದರೆ 2008ರಲ್ಲಿ ೨೧.5ಮಿಲಿಯನ್(1ಮಿಲಿಯನ್=೧೦,೦೦,000ಕೆಜಿ) ತಂಬಾಕು ಹರಾಜಾಗಿದೆ.ಮತ್ತು ಕ್ರಮವಾಗಿ 2007ರಲ್ಲಿ 102ಕೋಟಿ, 2008ರಲ್ಲಿ 235ಕೋಟಿ ವಹಿವಾಟು ನಡೆದಿದೆ. ಕೇವಲ ಒಂದೇ ವರ್ಷದಲ್ಲಿ 133ಕೋಟಿ ಹೆಚ್ಚಿನ ವಹಿವಾಟು ನಡೆದಿದೆ. ಈ ಬಾರಿ ಅದು ದುಪ್ಪಟ್ಟು ಆಗುವ ಸಾಧ್ಯತೆ ನಿಚ್ಚಳವಾಗಿದೆ. ಪತ್ರಿಕೆಯೊಂದಿಗೆ ಮಾತನಾಡಿದ ಹರಾಜು ಮಾರುಕಟ್ಟೆ ಅಧೀಕ್ಷಕ ಶಿವರುದ್ರಯ್ಯಕಳೆದ ಬಾರಿಗಿಂತ ೩.5ಮಿಲಿಯನ್ ನಷ್ಟು ತಂಬಾಕು ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗಲಿದೆ, ಒಟ್ಟಾರೆಯಾಗಿ 25ಮಿಲಿಯನ್ ತಂಬಾಕು ಮಾರುಕಟ್ಟೆಗೆ ಆವಕವಾಗುವುದೆಂದು ನಿರೀಕ್ಷಿಸಲಾಗಿದೆ ಎಂದರು. ಇದುವರೆಗೂ ರಾಮನಾಥಪುರ ಮಾರುಕಟ್ಟೆ ವ್ಯಾಪ್ತಿಯಲ್ಲಿ ಭವ್ಯ, ರತ್ನ ದಂತಹ ತಳಿಗಳನ್ನು ಬೆಳೆಯಲಾಗುತ್ತಿತ್ತು. ಕಳೆದ 2ವರ್ಷಗಳಲ್ಲಿ ಕಾಂಚನ ಎಂಬ ನೂತನ ತಳಿಯನ್ನು ರೈತರು ಬೆಳೆದಿದ್ದಾರೆ ಅದು ಅಧಿಕ ಇಳುವರಿ ನೀಡಿದೆ ಹಾಗು ನಿರಿಕ್ಷೆಗು ಮೀರಿದ ಬೆಲೆ ರೈತರಿಗೆ ಸಿಕ್ಕಿರುವುದು ತಂಬಾಕು ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಕಾರಣವಾಗಿದೆ ಎಂದರು. ಕಳೆದ ವರ್ಷ ಶಿವಮೊಗ್ಗದ ತಂಬಾಕು ಮಾರುಕಟ್ಟೆಯನ್ನು ರಾಮನಾಥಪುರಕ್ಕೆ ವರ್ಗಾಯಿಸಿರುವುದರಿಂದ ಇಲ್ಲಿನ ತಂಬಾಕು ಹರಾಜು ಮಾರುಕಟ್ಟೆ ವ್ಯಾಪ್ತಿ ವಿಸ್ತಾರವಾದಂತಾಗಿದೆ. ರಾಮನಾಥಪುರದಲ್ಲಿ ೭ ಹಾಗೂ 63ಪ್ಲಾಟ್ ಫಾರಂಗಳು ಸ್ಥಾಪನೆಯಾಗಿವೆ. ಈ ಮಾರುಕಟ್ಟೆಗೆ ತಾಲ್ಲೂಕಿನ ರಾಮನಾಥಪುರ, ದೊಡ್ಡಮಗ್ಗೆ, ಮಲ್ಲಿಪಟ್ಟಣ ಕೊಣನೂರು ಹೋಬಳಿ ಸೇರಿದಂತೆ ಹೊಳೆನರಸೀಪುರದ ಹಳ್ಳಿ ಮೈಸೂರು, ಕೊಡಗಿನ ಶನಿವಾರಸಂತೆ ,ಹೆಬ್ಬಾಲೆ,ತೊರೆನೂರು, ಮೈಸೂರು ಜಿಲ್ಲೆಯ ಸಾಲಿಗ್ರಾಮ, ಹನಸೋಗೆ, ಜಿಲ್ಲೆಯ ಆಲೂರು ಹಾಗೂ ಶಿವಮೊಗ್ಗದಿಂದ ತಂಬಾಕು ಆವಕವಾಗುತ್ತದೆ.
ದೇಶದಲ್ಲಿಯೇ ಅತ್ಯುತ್ಕ್ರುಷ್ಠ ತಂಬಾಕು ಬೆಳೆಯನ್ನು ರಾಮನಾಥಪುರ ಹಾಗೂ ಪಿರಿಯಾಪಟ್ಟಣ ಮಾರುಕಟ್ಟೆ ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತಿದೆ. ಈ ಭಾಗದ ಕೆಂಪು ಮಣ್ಣು ಹಾಗೂ ಅದರ ನೀರು ಹಿಡಿದಿಡುವ ಸಾಮರ್ಥ್ಯ ೬.೫ ರಷ್ಟಿರುವುದು ಸಹಾ ತಂಬಾಕು ಉತ್ಕ್ರಷ್ಠತೆಗೆ ಪೂರಕವಾಗಿದೆ. ಸಧ್ಯ ತಾಲ್ಲೂಕಿನಲ್ಲಿ 11500ಮಂದಿ ಅಧಿಕೃತ ತಂಬಾಕು ಬೆಳೆಗಾರರಿದ್ದು 5000ದಷ್ಟು ಅನಧಿಕೃತ ತಂಬಾಕು ಬೆಳೆಗಾರರಿದ್ದಾರೆ. ಅನಧಿಕೃತ ಬೆಳೆಗಾರರನ್ನು ಅಧಿಕೃತಗೊಳಿಸಲು ಅರ್ಜಿ ಸ್ವೀಕರಿಸಲಾಗುತ್ತಿದೆ ಎಂದು ಅಧೀಕ್ಷಕ ಶಿವರುದ್ರಯ್ಯ ಹೇಳುತ್ತಾರೆ. ಈ ವರ್ಷ ೨೧,೫೦೦ ಹೆಕ್ಟೇರಿನಲ್ಲಿ ತಂಬಾಕು ಬೆಳೆಯಲಾಗುತ್ತಿದೆ. ಕಳೆದ ವರ್ಷ 17500ಹೆಕ್ಟೇರಿನ್ಲಲಿ ತಂಬಾಕು ಬೆಳೆಯಲಾಗಿತ್ತು. ಅದೇ ರೀತಿ ಪ್ರತೀ ಕೆಜಿಗೆ 2007ರಲ್ಲಿ 68ರೂಪಾಯಿ ಗರಿಷ್ಠ ಧಾರಣೆಯಿದ್ದರೆ, 2008ರಲ್ಲಿ ಅದು ರೂ.೧೫೩.೦೦ ಆಗಿತ್ತು, ಮತ್ತು ಕನಿಷ್ಠ ದರ ರೂ. ೪೦ ಆಗಿತ್ತು. ಪ್ರಸ್ತುತ ಆಂದ್ರಪ್ರದೇಶದಲ್ಲಿ ನಡೆಯುತ್ತಿರುವ ತಂಬಾಕು ವಹಿವಾಟಿನಲ್ಲಿ ಹೆಚ್ಚಿನ ಧಾರಣೆ 140ರೂಪಾಯಿ ಇದೆ. ಇದು ಏರಿಕೆ ಇಲ್ಲವೇ ಇಳಿಕೆ ಆಗಬಹುದು, ಯಾವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಶಿವರುದ್ರಯ್ಯ.
ಪ್ರತೀ ಹೆಕ್ಟೇರಿಗೆ 1550ಕೆಜಿ ಸರಿಸುಮಾರು ತಂಬಾಕು ಬೆಳೆ ಬೆಳೆಯಲು ಸಾಧ್ಯವಿದೆ, ಈ ಪ್ರಕಾರ ಆಳು-ಕಾಳು, ಗೊಬ್ಬರ,ತಂಬಾಕು ಬ್ಯಾರನ್ ನಿರ್ವಹಣೆ ಹಾಗೂ ಸಾಗಣೆ ವೆಚ್ಚಗಳೆಲ್ಲ ಸೇರಿ ಪ್ರತೀ ಕೇಜಿಗೆ ೪೫-50ರೂಪಾಯಿ ವೆಚ್ಚ ವಾಗುತ್ತದೆ. ಈ ದರದ ಅನುಸರಣೆಯಲ್ಲಿ ಮಾರುಕಟ್ಟೆ ದರ ಪ್ರತೀ ಕೆಜಿ ತಂಬಾಕಿಗೆ 3ರಷ್ಟಿದೆ. ಸಾಧಾರಣವಾಗಿ ಮೇ ಮಾಹೆಯ ಕೊನೆ ವಾರದಲ್ಲಿ ತಂಬಾಕು ಬಿತ್ತನೆ ಆಗುತ್ತದೆ. ಕೇವಲ ಮೂರು ತಿಂಗಳ ಅವಧಿಯಲ್ಲಿ ಬೆಳೆಯುವ ತಂಬಾಕು ಬೆಳೆಯನ್ನು ಕಟಾವು ಮಾಡಿ ಬ್ಯಾರನ್ ಮನೆಗಳಲ್ಲಿ ಬೇಯಿಸಲಾಗುತ್ತದೆ. 5ಮಾದರಿ ಹಂತಗಳಲ್ಲಿ ಇವನ್ನು ವಿಂಗಡಿಸುವುದರಿಂದ ಕ್ರಮವಾಗಿ 90ಡಿಗ್ರಿ, 110ಡಿಗ್ರಿ, 120ಡಿಗ್ರಿ ಮತ್ತು 160ದಿಗ್ರಿ ಸೆಲಿಷಿಯಸ್ ಉಷ್ಣಾಂಶದಲ್ಲಿ ಸೊಪ್ಪನ್ನು ಹದಮಾಡಿ ಬೇಯಿಸಲಾಗುತ್ತದೆ. ಒಂದು ಬ್ಯಾರನ್ ವ್ಯಾಪ್ತಿಗೆ ೩.5ಎಕ್ರೆ ಭೂಮಿಯ ವ್ಯಾಪ್ತಿಯಿದೆ.
ಈ ಬಾರಿ ತಂಬಾಕು ಬೆಳೆಯ ಪ್ರಮಾಣ ಹೆಚ್ಚಿರುವಂತೆಯೇ ಕೂಲಿ ಆಳುಗಳ ಕೊರತೆ ಹಾಗೂ ಸೌದೆ ಕೊರತೆ ತೀವ್ರವಾಗಿ ಕಾಡಲಾರಂಭಿಸಿದೆ,ಶ್ರೀಮಂತ ಬೆಳೆಗಾರರು ಪಕ್ಕದ ಆಂದ್ರಪ್ರದೇಶದಿಂದ ಕೂಲಿ ಆಳುಗಳನ್ನು ಗುತ್ತಿಗೆ ಆಧಾರದಲ್ಲಿ ಕರೆ ತರುತ್ತಾರೆ. ಮದ್ಯಮವರ್ಗದ ರೈತ ಸ್ಥಳೀಯರನ್ನೇ ಅವಲಂಬಿಸಬೇಕಾಗಿರುವುದರಿಂದ ತೀವ್ರ ತೊಂದರೆ ಅನುಭವಿಸಿದ್ದಾನೆ. ಪ್ರತೀ ಬ್ಯಾರನ್ ಒಂದಕ್ಕೆ ತಗುಲುವ ಕೂಲಿವೆಚ್ಚ ಈ ಬಾರಿ ದುಪ್ಪಟ್ಟಾಗಿದೆ, ಸೌದೆ ಕೊರತೆ ಕಾಡಲಾರಂಬಿಸಿದೆ , ಈ ವರ್ಷ ಆರಂಭದಲ್ಲಿ ನಿಗದಿತ ಻ವಧಿಗೆ ಮಳೆ ಆರಂಭವಾಗುದಿದ್ದುದು, ಭಯ ಹುಟ್ಟಿಸಿತ್ತಾದರೂ ತಂಬಾಕಿಗೆ ಅಗತ್ಯವಿರುವಷ್ಟು ಮಳೆ ಈಗ ಆಗಿದೆ, ಆದರೆ ಕೆಲವೆಡೆ ರೈತರು ಬೆಳೆಗೆ ಗೊಬ್ಬರ ಇಡುವಾಗ ಸರಿಯಾದ ಕ್ರಮ ಅನುಸರಿಸದಿದ್ದುದು ಬೆಳೆಯ ಕುಂಟಿತತೆಗೆ ಕಾರಣವಾಗಿತ್ತು. ಆದರೆ ಅಂತಹ ಸಂಖ್ಯೆ ತೀರಾ ವಿರಳ. ಈ ಬಾಗದ ಎಲ್ಲ ಬ್ಯಾಂಕುಗಳು ತಂಬಾಕು ಬೆಳೆಗಾರರಿಗೆ ನಿರಾತಂಕವಾಗಿ ಎಕ್ರೆಗೆ ೧೭-20ಸಾವಿರ ಸಾಲ ನೀಡಿವೆ. ಎಲ್ಲ ಸಂಕಷ್ಠಗಳ ನಡುವೆಯು ತಂಬಾಕು ಬೆಳೆಗಾರ ಹುಮ್ಮಸಿನಿಂದ ತಂಬಾಕು ಬೆಳೆ ಬೆಳೆಯುತ್ತಿದ್ದಾನೆ. ಮುಂಬರುವ ದಿನಗಳಲ್ಲಿ ನಿರೀಕ್ಷೆಯಂತೆ ಉತ್ಪಾದನೆಯಾಗಿ ದುಪ್ಪಟ್ಟು ಬೆಲೆ ದೊರೆತರೆ ರೈತ ಬಚಾವ್.