ಮಂಗಳವಾರ, ಜುಲೈ 14, 2009

ತಂಬಾಕು ಬಂಪರ್ ಬೆಳೆ: ಇಮ್ಮುಡಿಯಾದ ರೈತರ ಉತ್ಸಾಹ(ವಿಶೇಷ ವರದಿ) ಸಿ . ಜಯಕುಮಾರ್ತಂಬಾಕು ಬೆಳೆಗಾರರು ಈ ಬಾರಿ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಕಳೆದ 2ವರ್ಷಗಳಿಂದ ಈ ಭಾಗದಲ್ಲಿ ಬೆಳೆಯುವ ತಂಬಾಕಿಗೆ ಮಾರುಕಟ್ಟೆಯಲ್ಲಿ ನಿರೀಕ್ಷಿತ ಧಾರಣೆಗಿಂತ ಹೆಚ್ಚಿನ ಧಾರಣೆ ದೊರೆತಿರುವುದು ರೈತರ ಉತ್ಸಾಹವನ್ನು ಇಮ್ಮುಡಿಸುವಂತೆ ಮಾಡಿದೆ. ಇಲ್ಲಿನ ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯಲ್ಲಿ 2007ರಲ್ಲಿ ೧೭.5ಮಿಲಿಯನ್ ತಂಬಾಕು ಮಾರಾಟವಾಗಿದ್ದರೆ 2008ರಲ್ಲಿ ೨೧.5ಮಿಲಿಯನ್(1ಮಿಲಿಯನ್=೧೦,೦೦,000ಕೆಜಿ) ತಂಬಾಕು ಹರಾಜಾಗಿದೆ.ಮತ್ತು ಕ್ರಮವಾಗಿ 2007ರಲ್ಲಿ 102ಕೋಟಿ, 2008ರಲ್ಲಿ 235ಕೋಟಿ ವಹಿವಾಟು ನಡೆದಿದೆ. ಕೇವಲ ಒಂದೇ ವರ್ಷದಲ್ಲಿ 133ಕೋಟಿ ಹೆಚ್ಚಿನ ವಹಿವಾಟು ನಡೆದಿದೆ. ಈ ಬಾರಿ ಅದು ದುಪ್ಪಟ್ಟು ಆಗುವ ಸಾಧ್ಯತೆ ನಿಚ್ಚಳವಾಗಿದೆ. ಪತ್ರಿಕೆಯೊಂದಿಗೆ ಮಾತನಾಡಿದ ಹರಾಜು ಮಾರುಕಟ್ಟೆ ಅಧೀಕ್ಷಕ ಶಿವರುದ್ರಯ್ಯಕಳೆದ ಬಾರಿಗಿಂತ ೩.5ಮಿಲಿಯನ್ ನಷ್ಟು ತಂಬಾಕು ಅಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗಲಿದೆ, ಒಟ್ಟಾರೆಯಾಗಿ 25ಮಿಲಿಯನ್ ತಂಬಾಕು ಮಾರುಕಟ್ಟೆಗೆ ಆವಕವಾಗುವುದೆಂದು ನಿರೀಕ್ಷಿಸಲಾಗಿದೆ ಎಂದರು. ಇದುವರೆಗೂ ರಾಮನಾಥಪುರ ಮಾರುಕಟ್ಟೆ ವ್ಯಾಪ್ತಿಯಲ್ಲಿ ಭವ್ಯ, ರತ್ನ ದಂತಹ ತಳಿಗಳನ್ನು ಬೆಳೆಯಲಾಗುತ್ತಿತ್ತು. ಕಳೆದ 2ವರ್ಷಗಳಲ್ಲಿ ಕಾಂಚನ ಎಂಬ ನೂತನ ತಳಿಯನ್ನು ರೈತರು ಬೆಳೆದಿದ್ದಾರೆ ಅದು ಅಧಿಕ ಇಳುವರಿ ನೀಡಿದೆ ಹಾಗು ನಿರಿಕ್ಷೆಗು ಮೀರಿದ ಬೆಲೆ ರೈತರಿಗೆ ಸಿಕ್ಕಿರುವುದು ತಂಬಾಕು ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಕಾರಣವಾಗಿದೆ ಎಂದರು. ಕಳೆದ ವರ್ಷ ಶಿವಮೊಗ್ಗದ ತಂಬಾಕು ಮಾರುಕಟ್ಟೆಯನ್ನು ರಾಮನಾಥಪುರಕ್ಕೆ ವರ್ಗಾಯಿಸಿರುವುದರಿಂದ ಇಲ್ಲಿನ ತಂಬಾಕು ಹರಾಜು ಮಾರುಕಟ್ಟೆ ವ್ಯಾಪ್ತಿ ವಿಸ್ತಾರವಾದಂತಾಗಿದೆ. ರಾಮನಾಥಪುರದಲ್ಲಿ ೭ ಹಾಗೂ 63ಪ್ಲಾಟ್ ಫಾರಂಗಳು ಸ್ಥಾಪನೆಯಾಗಿವೆ. ಈ ಮಾರುಕಟ್ಟೆಗೆ ತಾಲ್ಲೂಕಿನ ರಾಮನಾಥಪುರ, ದೊಡ್ಡಮಗ್ಗೆ, ಮಲ್ಲಿಪಟ್ಟಣ ಕೊಣನೂರು ಹೋಬಳಿ ಸೇರಿದಂತೆ ಹೊಳೆನರಸೀಪುರದ ಹಳ್ಳಿ ಮೈಸೂರು, ಕೊಡಗಿನ ಶನಿವಾರಸಂತೆ ,ಹೆಬ್ಬಾಲೆ,ತೊರೆನೂರು, ಮೈಸೂರು ಜಿಲ್ಲೆಯ ಸಾಲಿಗ್ರಾಮ, ಹನಸೋಗೆ, ಜಿಲ್ಲೆಯ ಆಲೂರು ಹಾಗೂ ಶಿವಮೊಗ್ಗದಿಂದ ತಂಬಾಕು ಆವಕವಾಗುತ್ತದೆ.
ದೇಶದಲ್ಲಿಯೇ ಅತ್ಯುತ್ಕ್ರುಷ್ಠ ತಂಬಾಕು ಬೆಳೆಯನ್ನು ರಾಮನಾಥಪುರ ಹಾಗೂ ಪಿರಿಯಾಪಟ್ಟಣ ಮಾರುಕಟ್ಟೆ ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತಿದೆ. ಈ ಭಾಗದ ಕೆಂಪು ಮಣ್ಣು ಹಾಗೂ ಅದರ ನೀರು ಹಿಡಿದಿಡುವ ಸಾಮರ್ಥ್ಯ ೬.೫ ರಷ್ಟಿರುವುದು ಸಹಾ ತಂಬಾಕು ಉತ್ಕ್ರಷ್ಠತೆಗೆ ಪೂರಕವಾಗಿದೆ. ಸಧ್ಯ ತಾಲ್ಲೂಕಿನಲ್ಲಿ 11500ಮಂದಿ ಅಧಿಕೃತ ತಂಬಾಕು ಬೆಳೆಗಾರರಿದ್ದು 5000ದಷ್ಟು ಅನಧಿಕೃತ ತಂಬಾಕು ಬೆಳೆಗಾರರಿದ್ದಾರೆ. ಅನಧಿಕೃತ ಬೆಳೆಗಾರರನ್ನು ಅಧಿಕೃತಗೊಳಿಸಲು ಅರ್ಜಿ ಸ್ವೀಕರಿಸಲಾಗುತ್ತಿದೆ ಎಂದು ಅಧೀಕ್ಷಕ ಶಿವರುದ್ರಯ್ಯ ಹೇಳುತ್ತಾರೆ. ಈ ವರ್ಷ ೨೧,೫೦೦ ಹೆಕ್ಟೇರಿನಲ್ಲಿ ತಂಬಾಕು ಬೆಳೆಯಲಾಗುತ್ತಿದೆ. ಕಳೆದ ವರ್ಷ 17500ಹೆಕ್ಟೇರಿನ್ಲಲಿ ತಂಬಾಕು ಬೆಳೆಯಲಾಗಿತ್ತು. ಅದೇ ರೀತಿ ಪ್ರತೀ ಕೆಜಿಗೆ 2007ರಲ್ಲಿ 68ರೂಪಾಯಿ ಗರಿಷ್ಠ ಧಾರಣೆಯಿದ್ದರೆ, 2008ರಲ್ಲಿ ಅದು ರೂ.೧೫೩.೦೦ ಆಗಿತ್ತು, ಮತ್ತು ಕನಿಷ್ಠ ದರ ರೂ. ೪೦ ಆಗಿತ್ತು. ಪ್ರಸ್ತುತ ಆಂದ್ರಪ್ರದೇಶದಲ್ಲಿ ನಡೆಯುತ್ತಿರುವ ತಂಬಾಕು ವಹಿವಾಟಿನಲ್ಲಿ ಹೆಚ್ಚಿನ ಧಾರಣೆ 140ರೂಪಾಯಿ ಇದೆ. ಇದು ಏರಿಕೆ ಇಲ್ಲವೇ ಇಳಿಕೆ ಆಗಬಹುದು, ಯಾವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಶಿವರುದ್ರಯ್ಯ.
ಪ್ರತೀ ಹೆಕ್ಟೇರಿಗೆ 1550ಕೆಜಿ ಸರಿಸುಮಾರು ತಂಬಾಕು ಬೆಳೆ ಬೆಳೆಯಲು ಸಾಧ್ಯವಿದೆ, ಈ ಪ್ರಕಾರ ಆಳು-ಕಾಳು, ಗೊಬ್ಬರ,ತಂಬಾಕು ಬ್ಯಾರನ್ ನಿರ್ವಹಣೆ ಹಾಗೂ ಸಾಗಣೆ ವೆಚ್ಚಗಳೆಲ್ಲ ಸೇರಿ ಪ್ರತೀ ಕೇಜಿಗೆ ೪೫-50ರೂಪಾಯಿ ವೆಚ್ಚ ವಾಗುತ್ತದೆ. ಈ ದರದ ಅನುಸರಣೆಯಲ್ಲಿ ಮಾರುಕಟ್ಟೆ ದರ ಪ್ರತೀ ಕೆಜಿ ತಂಬಾಕಿಗೆ 3ರಷ್ಟಿದೆ. ಸಾಧಾರಣವಾಗಿ ಮೇ ಮಾಹೆಯ ಕೊನೆ ವಾರದಲ್ಲಿ ತಂಬಾಕು ಬಿತ್ತನೆ ಆಗುತ್ತದೆ. ಕೇವಲ ಮೂರು ತಿಂಗಳ ಅವಧಿಯಲ್ಲಿ ಬೆಳೆಯುವ ತಂಬಾಕು ಬೆಳೆಯನ್ನು ಕಟಾವು ಮಾಡಿ ಬ್ಯಾರನ್ ಮನೆಗಳಲ್ಲಿ ಬೇಯಿಸಲಾಗುತ್ತದೆ. 5ಮಾದರಿ ಹಂತಗಳಲ್ಲಿ ಇವನ್ನು ವಿಂಗಡಿಸುವುದರಿಂದ ಕ್ರಮವಾಗಿ 90ಡಿಗ್ರಿ, 110ಡಿಗ್ರಿ, 120ಡಿಗ್ರಿ ಮತ್ತು 160ದಿಗ್ರಿ ಸೆಲಿಷಿಯಸ್ ಉಷ್ಣಾಂಶದಲ್ಲಿ ಸೊಪ್ಪನ್ನು ಹದಮಾಡಿ ಬೇಯಿಸಲಾಗುತ್ತದೆ. ಒಂದು ಬ್ಯಾರನ್ ವ್ಯಾಪ್ತಿಗೆ ೩.5ಎಕ್ರೆ ಭೂಮಿಯ ವ್ಯಾಪ್ತಿಯಿದೆ.
ಈ ಬಾರಿ ತಂಬಾಕು ಬೆಳೆಯ ಪ್ರಮಾಣ ಹೆಚ್ಚಿರುವಂತೆಯೇ ಕೂಲಿ ಆಳುಗಳ ಕೊರತೆ ಹಾಗೂ ಸೌದೆ ಕೊರತೆ ತೀವ್ರವಾಗಿ ಕಾಡಲಾರಂಭಿಸಿದೆ,ಶ್ರೀಮಂತ ಬೆಳೆಗಾರರು ಪಕ್ಕದ ಆಂದ್ರಪ್ರದೇಶದಿಂದ ಕೂಲಿ ಆಳುಗಳನ್ನು ಗುತ್ತಿಗೆ ಆಧಾರದಲ್ಲಿ ಕರೆ ತರುತ್ತಾರೆ. ಮದ್ಯಮವರ್ಗದ ರೈತ ಸ್ಥಳೀಯರನ್ನೇ ಅವಲಂಬಿಸಬೇಕಾಗಿರುವುದರಿಂದ ತೀವ್ರ ತೊಂದರೆ ಅನುಭವಿಸಿದ್ದಾನೆ. ಪ್ರತೀ ಬ್ಯಾರನ್ ಒಂದಕ್ಕೆ ತಗುಲುವ ಕೂಲಿವೆಚ್ಚ ಈ ಬಾರಿ ದುಪ್ಪಟ್ಟಾಗಿದೆ, ಸೌದೆ ಕೊರತೆ ಕಾಡಲಾರಂಬಿಸಿದೆ , ಈ ವರ್ಷ ಆರಂಭದಲ್ಲಿ ನಿಗದಿತ ಻ವಧಿಗೆ ಮಳೆ ಆರಂಭವಾಗುದಿದ್ದುದು, ಭಯ ಹುಟ್ಟಿಸಿತ್ತಾದರೂ ತಂಬಾಕಿಗೆ ಅಗತ್ಯವಿರುವಷ್ಟು ಮಳೆ ಈಗ ಆಗಿದೆ, ಆದರೆ ಕೆಲವೆಡೆ ರೈತರು ಬೆಳೆಗೆ ಗೊಬ್ಬರ ಇಡುವಾಗ ಸರಿಯಾದ ಕ್ರಮ ಅನುಸರಿಸದಿದ್ದುದು ಬೆಳೆಯ ಕುಂಟಿತತೆಗೆ ಕಾರಣವಾಗಿತ್ತು. ಆದರೆ ಅಂತಹ ಸಂಖ್ಯೆ ತೀರಾ ವಿರಳ. ಈ ಬಾಗದ ಎಲ್ಲ ಬ್ಯಾಂಕುಗಳು ತಂಬಾಕು ಬೆಳೆಗಾರರಿಗೆ ನಿರಾತಂಕವಾಗಿ ಎಕ್ರೆಗೆ ೧೭-20ಸಾವಿರ ಸಾಲ ನೀಡಿವೆ. ಎಲ್ಲ ಸಂಕಷ್ಠಗಳ ನಡುವೆಯು ತಂಬಾಕು ಬೆಳೆಗಾರ ಹುಮ್ಮಸಿನಿಂದ ತಂಬಾಕು ಬೆಳೆ ಬೆಳೆಯುತ್ತಿದ್ದಾನೆ. ಮುಂಬರುವ ದಿನಗಳಲ್ಲಿ ನಿರೀಕ್ಷೆಯಂತೆ ಉತ್ಪಾದನೆಯಾಗಿ ದುಪ್ಪಟ್ಟು ಬೆಲೆ ದೊರೆತರೆ ರೈತ ಬಚಾವ್.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಜಯಕುಮಾರ್,
ನೀವು ಮೈಸೂರು ತಂಬಾಕು ಯಕೆ ಉತ್ಕ್ರಷ್ಠ ಅಂತ find out ? Few years back Ap failled to harvest then this mysore tobboca found very good in US becos its low nicotin content