ಶುಕ್ರವಾರ, ಜುಲೈ 24, 2009

ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಇದು ಕಟ್ಟೆಪುರ ಕಟ್ಟೆಯ ಕರ್ಮಕಾಂಡ

1.ಕೃಷ್ಣರಾಜಕಟ್ಟೆಯ ಬಲದಂಡೆ ನಾಲೆಯ ಬಳಿ ಗೋಡೆ ಕುಸಿದು ನೀರು ಹರಿಯುತ್ತಿರುವುದು

2.ಅರಕಲಗೂಡು ತಾಲೂಕಿನ ಕೃಷ್ಣರಾಜ ಕಟ್ಟೆಯ ತಡೆಬಾಗಿಲುಗಳು ನಾಶಹೊಂದಿದ ಪರಿಣಾಮ ನುಗ್ಗುತ್ತಿರುವ ನೀರು
3. ಕೃಷ್ಣರಾಜಕಟ್ಟೆಯ ಕಟ್ಟೆಪುರ ಎಡದಂಡೆಬಳಿ ಎರಡು ಗೇಟುಗಳು ಮುರಿದ ಪರಿಣಾಮ ಹೊರಬರುತ್ತಿರುವ ನೀರು
4. ಕೃಷ್ಣರಾಜ ಕದಟ್ಟೆಯ ಬಲದಂಡೆ ಜಾಕ್ ವೆಲ್ ಬಳಿ ಅಳವಡಿಸಲಾಗಿರುವ 4ಹೊಸಗೇಟ್ ಗಳು ಕಿತ್ತು ಬಂದಿರುವುದು
5. 2ತಿಂಗಳ ಹಿಂದೆ ಗೇಟ್ ಅಳವಡಿಸುವಾಗ ಸಮರ್ಪಕ ಕಾಮಗಾರಿ ಮಾಡದೇ ಕಿತ್ತುಹೋದ ಗೇಟ್ ಹಾಗು ತುಕ್ಕು ಹಿಡಿದಿರುವುದು.

ಳೆದ ವಾರ ಅರಕಲಗೂಡು ತಾಲೂಕಿನ ಕಟ್ಟೆಪುರ ಗ್ರಾಮದಲ್ಲಿರುವ ಕೃಷ್ಣರಾಜ ಕಟ್ಟೆಗೆ ಏಕಾಏಕಿ 9ಸಾವಿರ ಕ್ಯೂಸೆಕ್ಸ ನೀರು ಹರಿದು ಬಂದ ಪರಿಣಾಮ ಕಟ್ಟೆಯ 2ಬದಿ ಅಳವಡಿಸಲಾಗಿರುವ 18ಜಾಕ್ವೆಲ್ ಬಾಗಿಲುಗಳ ಪೈಕಿ 6ಬಾಗಿಲುಗಳು ಮುರಿದಿವೆ ಮತ್ತು ತೆರೆಯಲು ಆಗದ ಸ್ಥಿತಿಯಲ್ಲಿ ಮಡಚಿಕೊಂಡಿವೆ. ಪರಿಣಾಮ ರೈತರ ಬೆಳೆಗಳಿಗೆ ಸಂಗ್ರಹಿಸಲಾಗುತ್ತಿದ್ದ ಸಾವಿರಾರು ಕ್ಯೂಸೆಕ್ಸ ನೀರು ಪೋಲಾಗುತ್ತಿದೆ. ಇದರಿಂದಾಗಿ ಈ ಬಾಗದಲ್ಲಿ ಶುಂಠಿ ಹಾಗೂ ತೋಟದ ನೂರಾರು ಎಕರೆ ಬೆಳೆ ನೆರೆಯಹಾವಳಿಗೆ ತುತ್ತಾಗಿದೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಅಧಿಕೃತ ಮಾಹಿತಿಗಳೊಂದಿಗೆ ಪತ್ರಿಕೆ ವರದಿ ಪ್ರಕಟಿಸಿತ್ತು. ಆದರೆ ಹಾರಂಗಿ ಜಲಾಶಯ ಯೋಜನೆಯ ಅಧಿಕಾರಿಗಳು ಇಲ್ಲಿನ ಕಾಮಗಾರಿಗಳಲ್ಲಿ ಎಸಗಿರುವ ತಪ್ಪು ಮತ್ತು ಕಳಪೆ ಕಾಮಗಾರಿ ನಿರ್ವಹಣೆ ಬಯಲಿಗೆ ಬಂದಿತೆನ್ನುವ ಭಯಕ್ಕೆ ಬಿದ್ದು ತರಾತುರಿಯಲ್ಲಿ ಪತ್ರಿಕಾಹೇಳಿಕೆ ನೀಡಿ ಪತ್ರಿಕೆಯ ವರದಿಯನ್ನು ಅಲ್ಲಗೆಳೆದಿತ್ತು. ಆದರೆ ಸಾರ್ವಜನಿಕರಿಗೆ ವಿಶ್ವಾಸಾರ್ಹ ಮಾಹಿತಿ ಒದಗಿಸುವ ದೃಷ್ಠಿಯಿಂದ ಪತ್ರಿಕೆ ಮತ್ತೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿ ಈ ವರದಿ ನೀಡಿದೆ. ಕಳೆದ ಎರಡು ತಿಂಗಳ ಹಿಂದೆಯಷ್ಟೆ ಹಳೆಯ ಜಾಕ್ವೆಲ್ ಬಾಗಿಲುಗಳನ್ನು ತೆಗೆದು 18ಹೊಸ ಬಾಗಿಲುಗಳನ್ನು ಅಳವಡಿಸಿರುವ ಅಧಿಕಾರಿಗಳು ಕಳಪೆಯಾಗಿ ಕಾಮಗಾರಿ ನಿರ್ವಹಿಸಿದ ಪರಿಣಾಮ ಬಾಗಿಲು ಗಳು ಹಾನಿಗೊಳಗಾಗಿವೆ ಮತ್ತು ಕಟ್ಟೆಯ ಬಲದಂಡೆ ಬಳಿ ಕಟ್ಟಡವೇ ಕಿತ್ತುಹೋಗಿದೆ, ಎಡದಂಡೆ ಬಳಿ ನೀರು ಸೋರಿಕೆಯಾಗುತ್ತಿದೆ. ಮಳೆ ಹೆಚ್ಚಿನ ಪ್ರಮಾಣದಲ್ಲಿ ಬಿದ್ದರೆ ಕಟ್ಟೆ ಅಪಾಯಕ್ಕೆ ಸಿಲುಕುವ ಪರಿಸ್ಥಿತಿ ಇದೆ. ಜಿಲ್ಲಾಧಿಕಾರಿಗಳು ಹಾರಂಗಿ ಜಲಾಶಯದ ಅಧಿಕಾರಿಗಳ ವರದಿಯನ್ನು ನೆಚ್ಚಿ ಕೂರದೇ ಸ್ಥಳಕ್ಕೆ ಭೇಟಿ ನೀಡಿದರೆ ವಾಸ್ತವ ಪರಿಸ್ಥಿತಿ ಅರಿಯಬಹುದು.
ಕಾಮೆಂಟ್‌ಗಳಿಲ್ಲ: