- ಅರಕಲಗೂಡು ಜಯಕುಮಾರ್
ಅರಕಲಗೂಡು: ಮಹಾತ್ಮ ಗಾಂಧಿ ರಾಷ್ಟ್ರೀಯ ುದ್ಯೋಗ ಖಾತ್ರಿ ಯೋಜನೆ ಕಾಯ್ದೆ ಸ್ವರೂಪದ ಉತ್ತಮ ಯೋಜನೆ. ಇಂತಹ ಯೋಜನೆಯಲ್ಲಿ ಮಾರ್ಗಸೂಚಿ ಯನ್ವಯಮಾತ್ರವೇ ಕೆಲಸ ಮಾಡಬೇಕು. ಆದರೆತಾಲೂಕಿನಲ್ಲಿ ನಡೆದ ಖಾತ್ರಿ ಅನುಷ್ಠಾನದಲ್ಲಿ ಎಲ್ಲ ನಿಯಮಗಳನ್ನುಗಾಳಿಗೆ ತೂರಲಾಗಿದೆ.ಉದ್ಯೋಗ ಖಾತ್ರಿಯ ಆರಂಭದಲ್ಲಿ 80ರೂಪಾಯಿ ದಿನಗೂಲಿ ಇದ್ದ ವೆಚ್ಚವನ್ನು 100ರೂ.ಗೆ ಏರಿಸಲಾಗಿದೆ. ಉದ್ಯೋಗ ಖಾತ್ರಿ ಯಲ್ಲಿ ಕೆಲಸ ಗಿಟ್ಟಿಸಲು ಮಾನದಂಡಗಳಿದ್ದು ಸಾರ್ವಜನಿಕವಾಗಿ ಹೆಸರು ನೋಂದಣಿ ಮಾಡಿಸಲು ಅವಕಾಶವಿದೆ, ಹೆಸರು ನೋಂದಾಯಿಸಿದ ಮೇಲೆ 15ದಿನಗಳೊಳಗೆ ಜನಸಂಖ್ಯೆಗನುಗುಣವಾಗಿ ಕಾಮಗಾರಿಯನ್ನು ನಿರ್ದರಿಸಬೇಕು. ಅಂತಹ ಕಾಮಗಾರಿಗೆ ವಾರ್ಡ್ ಸಭೆ ನಡೆಸಿ ಗ್ರಾ.ಪಂ. ನಿರ್ಣಯಿಸಬೇಕು ನಂತರ ಜಿ.ಪ.ಇಂಜಿನಿಯರು ಯೋಜನೆ ತಯಾರಿಸಿ ವೆಚ್ಚವನ್ನು ನಿಗದಿಪಡಿಸಬೇಕು ಈ ಹಂತ ಮುಗಿದ ಮೇಲೆ .ತಾಪಂ. ಕಾರ್ಯ ನಿರ್ವಾಹಕ ಅಧಿಕಾರಿ ಕೆಲಸದ ಆದೇಶ ನೀಡಬೇಕು ಆದರೆ ಜಿಲ್ಲೆಯಾಧ್ಯಂತ ಆಗಿದ್ದೇನು? ಜಿಲ್ಲೆಯ ಯಾವ ತಾಲೂಕುಗಳಲ್ಲೂ ಖಾತ್ರಿ ಅನುಷ್ಠಾನದ ಮಾನದಂಡಗಳನ್ನು ಅನುಸರಿಸಿಲ್ಲ. ಅರಕಲಗೂಡು ತಾಲ್ಲೂಕಿನಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಎಸ್ಟಿಮೇಟುಗಳನ್ನು ಮಾಡಲಾಗಿದೆ, ಕೂಲಿಕಾರರಿಗೆ ಕೆಲಸ ಕೊಡುವ ಬದಲು ಅನಧಿಕೃತವಾಗಿ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿದೆ, ಕೂಲಿ ಹಣವನ್ನು ರಾಷ್ರ್ಟೀ ಯಬ್ಯಾಂಕುಗಳಲ್ಲಿ ಪಾವತಿಸಬೇಕೆಂಬ ಆದೇಶವಿದ್ದರೂ ಸ್ಥಳೀಯ ಬ್ಯಾಂಕುಗಳಲ್ಲ ೂಕೂಲಿಕಾರರ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ. ಬ್ಯಾಂಕುಸಿಬ್ಬಂದಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೂ ಲಿ ಹಣ ಡ್ರಾ ಮಾಡಲಾಗಿದೆ. ಕೂಲಿಕಾರರ ಕಾರ್ಡುಗಳು ಕೂಲಿಕಾರರ ಬಳಿ ಇರದೇ ಗುತ್ತಿಗೆದಾರರ ಬಳಿ ಕೇಂದ್ರೀಕೃತವಾಗಿದೆ. ಇಂಜಿನಿಯರುಗಳು ಮತ್ತುಗ್ರಾ.ಪಂ. ಕಾರ್ಯದರ್ಶಿಗಳು ನಕಲಿ ಎನ್ ಎಂ ಆರ್ ,ಎಸ್ಟೀಮೇಟುಗಳನ್ನು ಲೆಕ್ಕವಿಲ್ಲದಷ್ಟು ಸಂಖ್ಯೆಯ ಲ್ಲಿ ಮಾಡಿದ್ದಾರೆ. ಅಮಾಯಕ ಗುತ್ತಿಗೆದಾರರುಗಳಿಗೆ ಪಂಚಾಯ್ತಿಗಳಲ್ಲಿ ಅನುಮೋದನೆ ಇಲ್ಲದಿದ್ದರೂ ಕಾರ್ಯದೇಶ ನೀಡಿ ಅನೇಕ ಕೆಲಸಗಳನ್ನು ಮಾಡಿಸಲಾಗಿದೆ. ಆದರೆ ಇಂಜಿನಿಯರುಗಳು ಯೋಜನೆಯಲ್ಲಿ ಲಭ್ಯವಿಲ್ಲದ 125ರೂ ಕೂಲಿಯನ್ನು ನಮೂದಿಸಿ ಸರಕು ಸಾಮಾಗ್ರಿ ಬಿಲ್ , ತೆರಿಗೆ,ಕಮೀಷನ್ ಗಳನ್ನು ಡ್ರಾ ಮಾಡಿಕೊಂಡು ಲೂಟಿ ಮಾಡಿದ್ದಾರೆ. ಗುತ್ತಿಗೆದಾರರು ಗಂಟುಕಳೆದುಕೊಂಡು ಬಾರದ ಕಾಮಗಾರಿ ಬಿಲ್ ಗಳಿಗೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ನೈಜವಾಗಿ ಕಾಮಗಾರಿಗಳನ್ನು ಕೂಲಿಯಾಳುಗಳು ನಿರ್ವಹಿಸದಿದ್ದುದರಿಂದ ಇವ ತ್ತು ಕೂಲಿ ಹಣವನ್ನು ಕೇಳಿಕೊಂ ಡು ಯಾವ ಕಾರ್ಮಿಕನು ಧ್ವನಿಯೆತ್ತುತ್ತಿಲ್ಲ. ಈ ಎಲ್ಲ ಅಂಶಗಳನ್ನು ಸವಿಸ್ತಾರವಾಗಿ ಜಿ.ಪಂ. ಸಿಇಓ ಅಂಜನ್ ಕುಮಾರ್ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿದ್ದಾರೆ.ಪತ್ರದ ಮುಂದುವರೆದ ಮುಖ್ಯಾಂಶಗಳು ಈ ಮುಂದಿನಂತಿವೆ.
- ಕ್ರಿಯಾ ಯೋಜನೆ ಮೀರಿ ಅಥವಾ ಕ್ರಿಯಾಯೋಜನೆಯಲ್ಲಿ ಇಲ್ಲದಿದ್ದರೂ ತಮ್ಮ ಅಧೀನ ತಾಂತ್ರಿಕ ಸಿಬ್ಬಂದಿ ತಯಾರಿಸಿರುವ ಅಂದಾಜುಗಳಿಗೆ ಅನುಷ್ಠಾನಾಧಿಕಾರಿ ಜವಾಬ್ದಾರರು. ಕಾರಣ ಅಂತಹ ಕಾಮಗಾರಿಗಳಿಗೂ ಸಾಮಾಗ್ರಿ ಬಿಲ್ಲು ಪಾವತಿಸಿದ್ದಾರೆ, ಸೂಕ್ತ ಪರಿಶೀಲನೆ ನಡೆಸಿದ್ದರೆ ಇಂತಹ ನ್ಯೂನ್ಯತೆಗಳು ಬರುತ್ತಿರಲಿಲ್ಲ. ಸಾಮಾಗ್ರಿ ಸರಬರಾಜು ಬಿಲ್ಲನ್ನು ಸರಬರಾಜು ಗುತ್ತಿಗೆದಾರರುಗಳಿಗೆ ನೇರವಾಗಿ ಅನುಷ್ಟಾನಾಧಿಕಾರಿಗಳೂ ಹಾಗು ಕಾರ್ಯ ನಿರ್ವಾಹಕ ಏಜೆನ್ಸಿ ಸ.ಕಾ.ಇಂ. ನಾಗೇಶ್ ಚೆಕ್ ಮುಖೇನ ಹಣ ಪಾವತಿಸಿರುತ್ತಾರೆ. ಹಣ ಪಾವತಿಸಿದ ಎಲ್ಲ ಸಾಮಾಗ್ರಿಗಳು ಆಯಾ ಕಾಮಗಾರಿಗಳಿಗೆ ಸದ್ಭಳಕೆ ಮಾಡಿರುವ ಬಗ್ಗೆ ಖಾತರಿ ಪಡಿಸಿಕೊಂಡಿರುವುದಿಲ್ಲ.
- ತಾಲ್ಲೋಕಿಗೆ ಉದ್ಯೋಗ ಖಾತ್ರಿ ಕಾರ್ಯ ಹಂಚಿಕೆಯನ್ನು ಒಬ್ಬನೇ ಶಾಖಾ ಇಂಜಿನಿಯರ್ ನಿಂಗೇಗೌಡ ಎಂಬುವವರಿಗೆ ವಹಿಸಿರುತ್ತಾರೆ. ಜೊತೆಗೆ ಹಂಚಿಕೆಯನುಸಾರ ಜಿ.ಪಂ.-ತಾ.ಪಂ.-ಗ್ರಾ.ಪಂ.ವ್ಯಾಪ್ತಿಯ ಹತ್ತಾರು ಲೆಕ್ಕ ಶೀರ್ಷಿಕೆಗಳ ಕಾಮಗಾರಿಗಳನ್ನು ನಿರ್ವಹಿಸಲು ಹಂಚಿಕೆ ಮಾಡಿದ್ದಾರೆ. ಈ ಕಾರ್ಯ ಹಂಚಿಕೆ ತೀರ್ಮಾನ ಅನುಮಾನಕ್ಕೆ ಆಸ್ಪದ ನೀಡಿದೆ.ಹೀಗಾಗಿ ಪರಿಣಾಮಕಾರಿ ಕಾರ್ಯ ನಿರ್ವಹಣೆ ಮತ್ತು ದಾಖಲೆಗಳ ನಿರ್ವಹಣೆ ಸೂಕ್ತವಾಗಿರುವುದಿಲ್ಲ.29ಗ್ರಾ.ಪಂ.ಗಳ ಖಾತ್ರಿ ಕಾರ್ಯ ನಿರ್ವಹಣೆ ಒಬ್ಬ ಇಂಜಿನಿಯರ್ ನಿಂದ ಸಾಧ್ಯವಿಲ್ಲದಾಗಿದ್ದು ಅವ್ಯವಹಾರಕ್ಕೆ ಎಡೆ ಮಾಡಿಕೊಟ್ಟಂತಾಗಿದೆ. ಹೀಗಾಗಿ ಇವರು ಬಹಳಷ್ಟು ಕಾಮಗಾರಿಗಳ ಅಂದಾಜು ಸಿದ್ಧಪಡಿಸಿಲ್ಲ, ಅಳತೆ ಬರೆದಿಲ್ಲ ಸ್ಥಳ ಪರಿಶೀಲನೆ ಮಾಡಿಲ್ಲ, ಅಳತೆ ಪರಿಶೀಲಿಸಿಲ್ಲಸಾಮಾಗ್ರಿ ಬಿಲ್ಲುಗಳು ಹಾಗು ಸರಬರಾಜುದಾರರ ವಿಳಾಸಗಳು ತಿದ್ದಲ್ಪಟ್ಟಿವೆ.
- ಕಾಮಗಾರಿಯ ನುಷ್ಠಾನದ ನಂತರದ ಹಂತದಲ್ಲಿ ಕೂಲಿ ಮತ್ತು ಸಾಮಾಗ್ರಿ ಪಾವತಿಗೆ ಕ್ರಮವಾಗಿ ಆದ್ಯತೆ ಇರುತ್ತದೆ ಆದರೆ ಸಾಮಾಗ್ರಿ ಬಿಲ್ಲು ಪಾವತಿಗೆ ಪ್ರಥಮ ಆದ್ಯತೆ ನೀಡಿ ಕೂಲಿಕಾರರಿಗೆ ಹಣ ಪಾವತಿಸದೇ ಇರುವುದು ಉದ್ಯೋಗ ಖಾತ್ರಿ ಯೋಜನೆಯ ಉದ್ದೇಶ ವಿಫಲವಾದಂತೆ ಆಗಿದೆ. ಅನುಷ್ಠಾನಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಲಹೆಗಳನ್ನು ಸೂಚನೆಗಳನ್ನು ಸುತ್ತೋಲೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡಿರುವುದಿಲ್ಲ ಮತ್ತು ತಮ್ಮ ಅಧೀನ ಅಧಿಕಾರಿಗಳಿಗೂ ಸೂಕ್ತ ತಿಳುವಳಿಕೆ ನೀಡಿರುವುದಿಲ್ಲ.ಕಾಮಗಾರಿಗಳ ನಿರ್ವಹಣೆ ಉಸ್ತುವಾರಿ ಹಾಗೂ ದಾಖಲೆಗಳ ನಿರ್ವಹಣೆ ಎಲ್ಲಾ ವಿಭಾಗಗಳಲ್ಲೂ ಸ.ಕಾ.ಇಂ. ಮತ್ತು ಕಿ.ಇಂ. ವಿಫಲರಾಗಿದ್ದು ಪರಿಣಾಮಕಾರಿ ಪರಿಶೀಲನೆ ಮಾಡದಿರುವ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ.
- ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ುದ್ಯೋಗ ಖಾತ್ರಿ ಕಾಯ್ದೆಯು ಸಾಮಾನ್ಯ ಯೋಜನೆಯಾಗಿರದೇ ಕಾಯ್ದೆಯ ಸ್ವರೂಪ ಹೊಂದಿದ್ದು ಗ್ರಾಮೀಣ ಜನತೆಗೆ ಉದ್ಯೋಗ ೊದಗಿಸುವ ತನ್ಮೂಲಕ ಆಸ್ತಿ ಸೃಷ್ಟಿಸುವ ಅತ್ಯಂತ ಮಹತ್ವಾಕಾಂಕ್ಷೆಯನ್ನು ಹೊಂದಿದೆ ಸಮಗ್ರ ಯೋಜನೆಯಾಗಿದೆ. ಹೀಗಾಗಿ ಸದರಿ ಕಾಯ್ದೆ ಅಡಿಯಲ್ಲಿನ ಅನುಷ್ಠಾನ ಮಾರ್ಗಸೂಚಿ ಇತರ ವ್ಯತ್ಯಯಗಳಿಗೆ ಅಧಿಕಾರಿಗಳು ಕಾರಣರಾಗಿದ್ದು ಇದನ್ನು ಕಾಯ್ದೆ ಉಲ್ಲಂಘನೆ ಎಂದು ಪರಿಗಣಿಸಿ ಇದರಿಂದ ುದ್ಭವವಾಗಿರುವ ಅವ್ಯವಹಾರ ದುರುಪಯೋಗದ ಸಂಬಂಧಗಳಿಗೆ ಅಧಿಕಾರಿಗಳು ಮತ್ತು ನೌಕರರು ಸಂಶಯಾತೀತವಾಗಿ ಕಾರಣಕರ್ತರಾಗಿರುತ್ತಾರೆ. ಅಂತೆಯೇ ಉದ್ದೇಶ ಪೂರ್ವಕವಾಗಿ ಹಾಗೂ ಪ್ರಜ್ಞಾಪೂರ್ವಕವಾಗಿ ಕರ್ತವ್ಯ ಲೋಪ ಎಸಗಿದ್ದು ಶಿಸ್ತು ಕ್ರಮಕ್ಕೆ ಅರ್ಹರಾಗಿರುತ್ತಾರೆ.(ಮುಂದುವರೆಯುವುದು)
ಅರಕಲಗೂಡು: ತಾಲೂಕಿನಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ 100ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು ಹಲವುಕೆರೆ-ಕಟ್ಟೆ-ನಾ ಲೆಗಳು ಒಡೆದು ಸಾವಿರಾರು ಎಕರೆ ಬೆಳೆ ಜಲಾವೃತ್ತವಾಗಿದೆ. ಗುರುವಾರ ಸಂಜೆ ಸುರಿದ ಮಳೆಗೆ ಮಲ್ಲಿಪಟ್ಟಣದಲ್ 2, ರಾಮನಾಥಪುರದಲ್ಲಿ -36 ಕೊಣನೂರಿನಲ್ಲಿ 32, ಕಸಬ ಹೋಬಳಿಯಲ್ಲಿ 8, ದೊಡ್ಡಮಗ್ಗೆಯಲ್ಲಿ 23 ಮನೆಗಳು ಕುಸಿದಿವೆ ಯಾದರೂ ಯಾವುದೇ ಜೀವಹಾನಿ ಸಂಭವಿಸಿಲ್ಲ. ಕಳೆದ 4ದಿನಗಳಿಂ ದ ತಾಲ್ಲೂಕಿನಾಧ್ಯಂತ ಮಳೆಗೆ 200ಕ್ಕೂ ಹೆಚ್ಚು ಕುಸಿದಿರುವ ವರದಿಯಾಗಿದೆ. ರಾಗಿಬೈಚನಹಳ್ಳಿಯಲ್ಲಿ ಕಲ್ವರ್ಟ್ ಕುಸಿದು ನೂರಾರು ಎಕರೆ ಜಮೀನು ಜಲಾವೃತ್ತವಾಗಿದ್ದರೆ, ಕಾಳೇನಹಳ್ಳಿಯಲ್ಲಿ ಕೆರೆ ಏರಿ ಒಡೆದಿದ, ಕೊಣನೂರು ಹೋಬಳಿಯಲ್ಲಿ ಹಾರಂಗಿ ಬಲದಂಡೆ ನಾಲೆ ಗೋಡೆ ಕುಸಿದಿದೆ, ಮಲ್ಲಿಪಟ್ಟಣದ ಮೊರಾ ರ್ಜಿಶಾಲೆಯಮೇಲ್ಚಾವಣಿ ಕುಸಿದಿದೆ, ಮುತ್ತಿಗೆ ಕೆರೆ ಏರಿ ಒಡೆದ ಪರಿಣಾಮ ಸಾವಿರಾರು ಎಕರೆ ಯಲ್ಲಿದ್ದ ತೆಂಗು,ಅಡಿಕೆ, ಬಾಳೆ, ಶುಂಠಿ, ಜೋಳ ಹಾಗೂ ಭತ್ತದ ಫಸಲು ನಾಶವಾಗಿದೆ. ಗ್ರಾಮೀಣ ಭಾಗದ ಹಲವು ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಸಂ ಚಾರಕ್ಕೆ ವ್ಯತ್ಯಯವಾಗಿದೆ. ಮುದ್ದನಹಳ್ಳಿ ಬಳಿ ರಸ್ತೆಯ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ರಸ್ತೆ ದಾಟಲು ಯತ್ನಿಸಿದ ಗೂಡ್ಸ್ ಆಟೋ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದಾಗ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಆಟೋ ಹಾಗೂ ಚಾಲಕನನ್ನು ರಕ್ಷಿಸಲಾಗಿದೆ. ಗುರುವಾರ ಸಂಜೆ ಸಿಡಿಲಿನಹೊಡೆತಕ್ಕೆ ಸಿ ಲುಕಿಮೃತಪಟ್ಟ ಬಾಲಕಿ ಮೇಘ ಳ ಅಂತ್ಯಕ್ರಿಯೆ ಇಂದು ಜರುಗಿತು. ಗಾಯಗೊಂಡಿದ್ದ ಮತ್ತಬ್ಬ ಬಾಲಕಿ ದೀಪಿಕಾ ಹಾಗೂ ಕಾಳಯ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ತಾಲೂಕು ಪಂಚಾಯ್ತಿ ಅಧ್ಯಕ್ಷ ಮಾದೇಶ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಬೊಮ್ಮೇಗೌಡ, ತಹಸೀಲ್ದಾರ್ ಸವಿತಾ, ಶಾಸಕ ಎ. ಮಂಜು, ಮಾಜಿ ಶಾಸಕ ಎ ಟಿ ರಾಮಸ್ವಾಮಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಅರಕಲಗೂಡು : ನೆರೆ ಹಾವಳಿ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ಚರ್ಚಿಸಲು ಶಾಸಕ ಎ. ಮಂಜು ಶುಕ್ರವಾರತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತುರ್ತು ಸಭೆ ನಡೆಸಿದರು. ನೆರೆಹಾವಳಿ ಪ್ರದೇಶಕ್ಕೆ ತಗೆರಳದೇ ನಿರ್ಲಕ್ಷಯ ಧೋರಣೆ ತಳೆದ ಜಿ.ಪಂ. ಇಂಜಿನಿಯರ್ ಈಶ್ವರ್ ನ್ನು ಅಮಾನತ್ತುಗೊಳಿಸಲು ಸೂಚಿಸಿದ ಶಾಸಕ ಮಂಜು ಬೆಳೆ ನಷ್ಟ ಕುರಿತು ಸೂಕ್ತ ಮಾಹಿತಿ ನೀಡದ ಸಹಾಯಕ ಕೃಷಿ ನಿರ್ದೇಶಕ ವಾಸುವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 15ದಿನಗಳಿಂದ ಮಳೆ ಸುರಿಯುತ್ತಿದ್ದರೂ ಸಹ ಸ್ಥಳಕ್ಕೆ ಭೇಟಿ ನೀಡದೆ ಮುಗುಮ್ಮಾಗಿದ್ದ ಅಧಿಕಾರಿಯ ವರ್ತನೆಯನ್ನು ಖಂಡಿಸಿದ ಅವರು 3ದಿನದೊಳಗೆ ಸಮಗ್ರ ಮಾಹಿತಿ ನೀಡಲು ಸೂಚಿಸಿದರು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇದ್ದು ಮಳೆ ಹಾನಿ ಕುರಿತ ವರದಿ ಹಾಗೂ ಪರಿಹಾರೋಪಾಯ ಒದಗಿಸುವಂತೆ ಸೂಚಿಸಿದರು. ಸಭೆಯಲ್ಲಿ ನಿನ್ನೆ ಸಿಡಿಲಿನಿಂದ ಮೃತಪಟ್ಟ ಗಂಜಲಗೋಡಿನ ಬಾಲಕಿಯ ಪೋಷಕರಿಗೆ 1ಲಕ್ಷರೂಪಾಯಿಯ ಪರಿಹಾರ ವಿತರಿಸಿದ ಶಾಸಕರು ಅದೇ ಘಟನೆಯಲ್ಲಿ ಗಾಯಗೊಂಡ ಬಾಲಕಿ ದೀಪಿಕಾ ಹಾಗೂ ಕಾಳಯ್ಯ ನ ಮನೆಯವರಿಗೆ 2000ಪರಿಹಾರದ ಚೆಕ್ ನೀಡಿದರು.
1 ಕಾಮೆಂಟ್:
ಉದ್ಯೋಗ ಖಾತರಿ ಯೋಜನೆಯ ಅಕ್ರಮದಲ್ಲಿ ಭಾಗಿಯಾದವರೆಲ್ಲರಿಗೂ ತಕ್ಕ ಶಿಕ್ಷೆಯಾಗಲಿ...ಇತರರಿಗೆ ಇದು ಪಾಠವಾಗಲಿ..
ಕಾಮೆಂಟ್ ಪೋಸ್ಟ್ ಮಾಡಿ