![](https://blogger.googleusercontent.com/img/b/R29vZ2xl/AVvXsEhOiyMuYmNR687H_RAaU4HQtItGCiT5Y_0Oma1Ape0vDbLL8IetEicFq2fIB7ctjtYzZV_KzkRD0AkO7hkBrgRzSsm-ZkFby1zOut-BNcMnSY7YYLEvPu2wZe4wS1JS5MRKfwnwc4VMPRZJ/s400/img1091105079_1_1.jpg)
ಬೆಂಗಳೂರು ಹುಡುಗಿ ಪ್ರಿಯಮಣಿ ಪುನೀತ್ ಜೊತೆಗೆ ರಾಮ್ ಚಿತ್ರದಲ್ಲಿ ನಟಿಸುತ್ತಿರುವ ಬೆನ್ನಿಗೇ ಗಣೇಶ್ ಜೊತೆಗೆ ನಾಯಕಿಯಾಗುವ ಅವಕಾಶ ಬಂದಿದೆ. ನಿಮಿಷಾಂಬ ಪ್ರೊಡಕ್ಷನ್ಸ್‌ನ ಚಂದ್ರಶೇಖರ್ ನಿರ್ಮಿಸುತ್ತಿರುವ ಹೆಸರಿಡದ ಚಿತ್ರದಲ್ಲಿ ಗಣೇಶ್‌ಗೆ ನಾಯಕಿಯಾಗಿ ಪ್ರಿಯಮಣಿ ಆಯ್ಕೆಯಾಗಿದ್ದಾರೆ. ಡಿಸೆಂಬರ್ ಆರಂಭದಲ್ಲಿ ಚಿತ್ರೀಕರಣವೂ ಆರಂಭವಾಗಲಿದೆ.ಈ ಸಿನಿಮಾವನ್ನು ಮುಸ್ಸಂಜೆ ಮಹೇಶ್ ನಿರ್ದೇಶಿಸಲಿದ್ದು, ಮಹೇಶ್ ಉತ್ತಮ ಚಿತ್ರದ ಆಫರ್ ಪಡೆದಿರುವುದಕ್ಕೆ ಸಂತಸಹೊಂದಿದ್ದಾರೆ. ಪಿ.ಕೆ.ಎಚ್.ದಾಸ್ ಈ ಚಿತ್ರಕ್ಕೆ ಕ್ಯಾಮರಾ ಉಸ್ತುವಾರಿ ವಹಿಸಲಿದ್ದಾರೆ ಎಂದು ಚಂದ್ರಶೇಖರ್ ತಿಳಿಸಿದರು.ಪ್ರಿಯಮಣಿ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದು, ಅವರು ಚಿತ್ರಕಥೆ ಕೇಳಿ ತುಂಬ ಹರ್ಷಚಿತ್ತರಾಗಿದ್ದಾರೆ. ತನ್ನ ಎರಡನೇ ಕನ್ನಡ ಚಿತ್ರವೂ ಉತ್ತಮವಾಗಿರೋದನ್ನೇ ಪಡೆದಿರೋದಕ್ಕೆ ಅವರಿಗೆ ತುಂಬ ಖುಷಿಯಾಗಿದೆ ಎಂದು ಚಂದ್ರಶೇಖರ್..
ತ್ರಿಷಾ ಬದಲಿಗೆ ಪ್ರಿಯಮಣಿ?: ಮೂಲಗಳ ಪ್ರಕಾರ ಖ್ಯಾತ ತಮಿಳು ನಟಿ ತ್ರಿಷಾಳನ್ನು ಕರೆತರುವ ಯೋಚನೆ ನಿರ್ಮಾಪಕರದ್ದಾಗಿತ್ತು. ತ್ರಿಷಾಗೂ ಕನ್ನಡದಲ್ಲಿ ನಟಿಸಲು ಆಸಕ್ತಿಯಿದೆ. ಆದರೆ ಆಕೆಗೆ ಸದ್ಯ ಡೇಟ್ಸ್ ಸಮಸ್ಯೆಯಿತ್ತು. ಈಗಾಗಲೇ ಆಕೆ ಹಿಂದಿ ಚಿತ್ರವೊಂದರಲ್ಲಿ ಬ್ಯುಸಿಯಾಗಿರೋದ್ರಿಂತ ಕನ್ನಡದಲ್ಲಿ ಸದ್ಯಕ್ಕೆ ನಟಿಸಲು ಆಕೆಯಲ್ಲಿ ಸಮಯದ ಕೊರತೆಯಿತ್ತು. ಹಾಗಾಗಿ ಪ್ರಿಯಮಣಿಯನ್ನು ಸಂಪರ್ಕಿಸಲಾಯಿತು ಎನ್ನಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ