ಸೋಮವಾರ, ನವೆಂಬರ್ 23, 2009
ಸೋಮವಾರ, ನವೆಂಬರ್ 16, 2009
CHILDREN'S DAY PROGRAMME AT ARKALGUD
ಮಂಗಳವಾರ, ನವೆಂಬರ್ 10, 2009
ಶಂಕರ್ ನಾಗ್ ನೆನಪಿಗೊಂದು ವೆಬ್ ಸೈಟು!
ಶಂಕರ್ ನಾಗ್ ಒಬ್ಬ ವ್ಯಕ್ತಿಯಾಗಿ, ಶಕ್ತಿಯಾಗಿ ನಾಡಿನ ಜನಮನದಲ್ಲಿ ಅಜರಾಮರ. ಯಾವುದೇ ಸ್ಟಾರ್ ಗಿರಿಯ ಹಂಬಲವಿಲ್ಲದೇ ತನ್ನದೇ ಆದ ಆಲೋಚನೆಗಳಿಗೆ ರೂಪು ಕೊಡುತ್ತಾ, ಹೊಸ ಚಿಂತನೆಗಳನ್ನು ಹರವಿಕೊಳ್ಳುತ್ತಾ ಸಾರಸ್ವತ ಲೋಕದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಧೀಮಂತ. ನಾಟಕದ ಹುಚ್ಚು ಹತ್ತಿಸಿಕೊಂಡು ಇದ್ದ ಬ್ಯಾಂಕ್ ಆಫ್ ಇಂಡಿಯಾದ ನೌಕರಿಗೆ ತಿಲಾಂಜಲಿ ಇಟ್ಟು ಕನಸುಗಳನ್ನು ಕಟ್ಟಿದ, ಕನಸನ್ನು ನಿಜ ಮಾಡಿದ, ತಾನೂ ಬೆಳೆದ, ತನ್ನೊಂದಿಗೆ ಹಲವರನ್ನು ಬೆಳೆಸಿದ, ವ್ಯವಸ್ಥೆಯಲ್ಲಿ ಒಂದು ಹೊಸ ಸಂಚಲನವನ್ನು ಹುಟ್ಟುಹಾಕಿದ ಸಾಹಸಿ ಆತ! ಬದುಕಿದ್ದು 3ದಶಕಗಳಾದರೂ ಸಾಧಿಸಿದ್ದು ಮತ್ತು ನಮ್ಮೊಂದಿಗೆ ಬಿಟ್ಟು ಹೋಗಿದ್ದು ಎಂದೆಂದಿಗೂ ಮರೆಯಲಾಗದ ಕನಸುಗಳ ಸಾಕಾರವನ್ನು ಹೊಸ ಸಂಚಲನದ ಸೃಷ್ಟಿಯನ್ನು. ಶಂಕರ್ ಗೆ ಅಂತ ಒಂದು ಅಭಿಮಾನಿ ಸಂಘವಿರಲಿಲ್ಲ ಆದರೆ ಆತ ತನ್ನ ನಾಟಕಗಳ ಮೂಲಕ ಜಗತ್ತಿನ ಹಲವು ದೇಶಗಳನ್ನು ಸುತ್ತಿದ್ದ. ದೇಶಿ ಪರಂಪರೆಯನ್ನು ವಿದೇಶದಲ್ಲೂ ಪಸರಿಸಿದ್ದ, ಒಂದೇ ಒಂದು ಟೆಲಿ ಸೀರಿಯಲ್ ಸ್ವಾಮಿ ಅಂಡ್ ಹಿಸ್ ಪ್ರೆಂಡ್ಸ್ ಆತನಿಗೆ ಜಾಗತಿಕ ಖ್ಯಾತಿಯನ್ನು ತಂದು ಕೊಟ್ಟಿತು. ದೇಶದಲ್ಲಿಯೇ ಮೊದಲನೆಯದು ಎನ್ನುವಂತಹ ಕಂಟ್ರಿಕ್ಲಬ್ ನಿರ್ಮಿಸಿದ ಶಂಕರ್ ಒಂದೊಳ್ಳೆಯ ಪತ್ರಿಕೆಯನ್ನು, ನಮ್ಮದೇ ಆದ ಕನ್ನಡದ ಛಾನಲ್ ಅನ್ನು, ಬಡವರಿಗೆ ಕಡಿಮೆ ಬೆಲೆಯ ಮನೆಯನ್ನು, ನಂದಿ ಬೆಟ್ಟಕ್ಕೆ ರೋಪ್ ವೇ ಯನ್ನು, ಮೆಟ್ರೋ ರೈಲು ಯೋಜನೆಗೆ ಹೀಗೆ ಬಿಡುವಿಲ್ಲದ ಕನಸುಗಳನ್ನು ಕಟ್ಟಿಕೊಂಡಿದ್ದ .
ಭಾನುವಾರ, ನವೆಂಬರ್ 8, 2009
ಗಣೇಶನೊಂದಿಗೆ ಕನ್ನಡದಲ್ಲಿ ಪ್ರಿಯಾಮಣಿಯ ಹೊಸ ಇನ್ನಿಂಗ್ಸ್
![](https://blogger.googleusercontent.com/img/b/R29vZ2xl/AVvXsEhOiyMuYmNR687H_RAaU4HQtItGCiT5Y_0Oma1Ape0vDbLL8IetEicFq2fIB7ctjtYzZV_KzkRD0AkO7hkBrgRzSsm-ZkFby1zOut-BNcMnSY7YYLEvPu2wZe4wS1JS5MRKfwnwc4VMPRZJ/s400/img1091105079_1_1.jpg)
ಬೆಂಗಳೂರು ಹುಡುಗಿ ಪ್ರಿಯಮಣಿ ಪುನೀತ್ ಜೊತೆಗೆ ರಾಮ್ ಚಿತ್ರದಲ್ಲಿ ನಟಿಸುತ್ತಿರುವ ಬೆನ್ನಿಗೇ ಗಣೇಶ್ ಜೊತೆಗೆ ನಾಯಕಿಯಾಗುವ ಅವಕಾಶ ಬಂದಿದೆ. ನಿಮಿಷಾಂಬ ಪ್ರೊಡಕ್ಷನ್ಸ್‌ನ ಚಂದ್ರಶೇಖರ್ ನಿರ್ಮಿಸುತ್ತಿರುವ ಹೆಸರಿಡದ ಚಿತ್ರದಲ್ಲಿ ಗಣೇಶ್‌ಗೆ ನಾಯಕಿಯಾಗಿ ಪ್ರಿಯಮಣಿ ಆಯ್ಕೆಯಾಗಿದ್ದಾರೆ. ಡಿಸೆಂಬರ್ ಆರಂಭದಲ್ಲಿ ಚಿತ್ರೀಕರಣವೂ ಆರಂಭವಾಗಲಿದೆ.ಈ ಸಿನಿಮಾವನ್ನು ಮುಸ್ಸಂಜೆ ಮಹೇಶ್ ನಿರ್ದೇಶಿಸಲಿದ್ದು, ಮಹೇಶ್ ಉತ್ತಮ ಚಿತ್ರದ ಆಫರ್ ಪಡೆದಿರುವುದಕ್ಕೆ ಸಂತಸಹೊಂದಿದ್ದಾರೆ. ಪಿ.ಕೆ.ಎಚ್.ದಾಸ್ ಈ ಚಿತ್ರಕ್ಕೆ ಕ್ಯಾಮರಾ ಉಸ್ತುವಾರಿ ವಹಿಸಲಿದ್ದಾರೆ ಎಂದು ಚಂದ್ರಶೇಖರ್ ತಿಳಿಸಿದರು.ಪ್ರಿಯಮಣಿ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದು, ಅವರು ಚಿತ್ರಕಥೆ ಕೇಳಿ ತುಂಬ ಹರ್ಷಚಿತ್ತರಾಗಿದ್ದಾರೆ. ತನ್ನ ಎರಡನೇ ಕನ್ನಡ ಚಿತ್ರವೂ ಉತ್ತಮವಾಗಿರೋದನ್ನೇ ಪಡೆದಿರೋದಕ್ಕೆ ಅವರಿಗೆ ತುಂಬ ಖುಷಿಯಾಗಿದೆ ಎಂದು ಚಂದ್ರಶೇಖರ್..
ತ್ರಿಷಾ ಬದಲಿಗೆ ಪ್ರಿಯಮಣಿ?: ಮೂಲಗಳ ಪ್ರಕಾರ ಖ್ಯಾತ ತಮಿಳು ನಟಿ ತ್ರಿಷಾಳನ್ನು ಕರೆತರುವ ಯೋಚನೆ ನಿರ್ಮಾಪಕರದ್ದಾಗಿತ್ತು. ತ್ರಿಷಾಗೂ ಕನ್ನಡದಲ್ಲಿ ನಟಿಸಲು ಆಸಕ್ತಿಯಿದೆ. ಆದರೆ ಆಕೆಗೆ ಸದ್ಯ ಡೇಟ್ಸ್ ಸಮಸ್ಯೆಯಿತ್ತು. ಈಗಾಗಲೇ ಆಕೆ ಹಿಂದಿ ಚಿತ್ರವೊಂದರಲ್ಲಿ ಬ್ಯುಸಿಯಾಗಿರೋದ್ರಿಂತ ಕನ್ನಡದಲ್ಲಿ ಸದ್ಯಕ್ಕೆ ನಟಿಸಲು ಆಕೆಯಲ್ಲಿ ಸಮಯದ ಕೊರತೆಯಿತ್ತು. ಹಾಗಾಗಿ ಪ್ರಿಯಮಣಿಯನ್ನು ಸಂಪರ್ಕಿಸಲಾಯಿತು ಎನ್ನಲಾಗಿದೆ.
ಯೋಗರಾಜ್ ಭಟ್ಟರ ಹೊಸ ಸಾಹಸಕ್ಕೆ ದಿಗಂತ್-ಪುನೀತ್
![](https://blogger.googleusercontent.com/img/b/R29vZ2xl/AVvXsEj6QDaVI9xBdMBF7Xv5gBcnsKshIoL5shPoRoeQP6QiWZR9UgWuzoxlWdJlfe_Ret6MP68t4O8C_Q0Mi55mspyb5JXhoweqBkc4fOtRP7igN4HKJl_7dkagv4LwTZGMprtDENd8K_G_C7Lu/s400/img1091105081_1_1.jpg)
ಗಣೇಶ್ ಈಸ್ ಗ್ರೇಟ್ ಆಕ್ಟರ್: ಮನಸಾರೆ ಚಿತ್ರದಲ್ಲಿ ದಿಗಂತ್ ಪಾತ್ರವನ್ನು ಗಣೇಶ್ ಪಾತ್ರಕ್ಕೆ ಎಲ್ಲರೂ ಹೋಲಿಸುತ್ತಿದ್ದಾರಲ್ಲಾ? ಎಂದರೆ, ''ಗಣೇಶ್ ಒಬ್ಬ ಗ್ರೇಟ್ ನಟ. ದಿಗಂತ್ ಕೂಡಾ ಉತ್ತಮ ನಟನೇ. ಇಬ್ಬರಿಗೂ ಅವರದ್ದೇ ಆದ ನಟನಾ ತಾಕತ್ತಿದೆ, ಪ್ರತಿಭೆಯಿದೆ. ಇವರಿಬ್ಬರನ್ನೂ ಹೋಲಿಸುವುದು ಸ್ವಾಭಾವಿಕ, ಯಾಕೆಂದರೆ ಇಬ್ಬರೂ ಒಂದೇ ನಿರ್ದೇಶಕನ ಜೊತೆಗೆ ಕೆಲಸ ಮಾಡಿದವರಲ್ಲವೇ'' ಎನ್ನುತ್ತಾರೆ ಭಟ್.ಹಾಗಾದರೆ ಈ ಬಾರಿ ಮನಸಾರೆ ಮೂಲಕ ಗಣೇಶ್ ಅವರನ್ನು ಈ ಬಾರಿ ಮಿಸ್ ಮಾಡಿಕೊಂಡಂತೆ ಅನಿಸುತ್ತಿಲ್ಲವಾ? ಎಂದರೆ ಅದಕ್ಕೂ ಯೋಗರಾಜ್ ಭಟ್ ಬಳಿ ಸಿದ್ಧ ಉತ್ತರವಿದೆ. ''ಚಿತ್ರಕಥೆ ಬರೆದು ಗಣೇಶ್ ಜೊತೆಗೆ ಚಿತ್ರಕ್ಕೆ ತಯಾರಿ ಮಾಡೋದೇ ಒಂಥರಾ ಖುಷಿ, ಮಜಾ. ಆದರೂ ಮನಸಾರೆ ಚಿತ್ರಕ್ಕೆ ನನ್ನ ಆಯ್ಕೆ ದಿಗಂತ್ ಆಗಿದ್ದರು. ಗಣೇಶ್ ಅಲ್ಲ. ಹಾಗಾಗಿ ನಾನು ಗಣೇಶ್ ಅವರನ್ನು ಮಿಸ್ ಮಾಡಿಕೊಂಡೆ ಅನಿಸಿಲ್ಲ. ಆದರೆ ಮನಸಾರೆಯ ಯಶಸ್ಸು ಮುಂಗಾರು ಮಳೆಯ ಪರ್ವಕಾಲದಿಂದ ನನಗೆ ಮುಕ್ತಿ ಕರುಣಿಸಿದೆ. ಮನಸಾರೆಯನ್ನು ಗಣೇಶ್ ಜೊತೆಗೆ ಕೂತು ವೀಕ್ಷಿಸಬೇಕು ಹಾಗೂ ಆತನ ಮುಖದಲ್ಲಿ ಪ್ರತಿಕ್ರಿಯೆಯನ್ನು ನೋಡಬೇಕು ಎಂಬ ಆಸೆಯಿದೆ. ಗಣೇಶ್‌ನನ್ನು ನಾನು ತುಂಬ ಗೌರವಿಸುತ್ತೇನೆ'' .
ಮನಸಾರೆಯಿಂದ ಯದ್ವಾತದ್ವಾ ಖುಷಿ: ಮನಸಾರೆಗೆ ಸಿಕ್ಕಾಪಟ್ಟೆ ಉತ್ತಮ ಪ್ರತಿಕ್ರಿಯೆ ಕಂಡು ಸ್ವತಃ ಯೋಗರಾಜ ಭಟ್ಟರು ಥ್ರಿಲ್ಲಾಗಿದ್ದಾರಂತೆ. ''ಕರ್ನಾಟಕದೆಲ್ಲೆಡೆ ಐಂದ್ರಿತಾ, ದಿಗಂತ್ ಹಾಗು ಇತರ ನಟರ ಜೊತೆಗೆ ಸುತ್ತಿದ್ದೇನೆ. ಜನರ ಪ್ರತಿಕ್ರಿಯೆ ಕಂಡು ಆಶ್ಚರ್ಯವಾಯಿತು. ನಾನೇ ಸ್ವತಃ ಇಂಥ ಯಶಸ್ಸನ್ನು ನಿರೀಕ್ಷಿಸಿರಲಿಲ್ಲ'' ಎನ್ನುತ್ತಾರೆ.''ಮುಂಗಾರು ಮಳೆಯ ನಂತರ ಬಹಳಷ್ಟು ಮಂದಿ ತಾವೂ ತಮ್ಮ ಸಿನಿಮಾದಲ್ಲಿ ಮುಂಗಾರು ಮಳೆಯಂತೆಯೇ ಮಾಡಹೊರಟರು. ನನ್ನ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ಮಾತಾಡಿಕೊಂಡರು. ಆದರೆ ಜನರು ನನ್ನ ಕೈಬಿಡಲಿಲ್ಲ. ನನ್ನ ಸಿನಿಮಾಗಳ ಬಗ್ಗೆ ಜನರು ಒಂದು ನಂಬಿಕೆಯಿಟ್ಟುಕೊಂಡಿದ್ದಾರೆ. ಮನಸಾರೆಯ ಈ ಯಶಸ್ಸು ಹಲವು ಮಂದಿಯ ಬಾಯಿಗೆ ಬೀಗ ಜಡಿದಂತಾಗಿದೆ'' ಎಂದು ಯೋಗರಾಜ ಭಟ್ಟರು ಹೇಳುತ್ತಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)