ಶುಕ್ರವಾರ, ಫೆಬ್ರವರಿ 19, 2010

ಕುಡಿಯುವ ನೀರಿಗೆ ಹಾಹಾಕಾರ ಯಗಟಿಯಲ್ಲಿ ಪ್ರತಿಭಟನೆಅರಕಲಗೂಡು: ಕುಡಿಯುವ ನೀರು ಒದಗಿಸುವಲ್ಲಿ ಗ್ರಾಮ ಪಂಚಾಯತ್ ಆಢಳಿತ ವಿಫಲವಾಗಿದೆ ಎಂದು ಆರೋಪಿಸಿ ಖಾಲಿ ಕೊಡಗಳೊಂದಿಗ ೆಪ್ರತಿಭಟನೆ ನಡೆಸಿದ ಪ್ರಸಂಗ ಇಲ್ಲಿಗೆ ಸಮೀಪದ ಯಗಟಿ ಗ್ರಾಮದಲ್ಲಿ ನಡೆಯಿತು. ಯಗಟಿ ಗ್ರಾಮದ ಹರಿಜನ ಕಾಲೋನಿಯಲ್ಲಿ ನಾಲ್ಕು ಬೋರ್ ವೆಲ್ ಗಳು ಇದ್ದು ಅವುಗಳ ಪೈಕಿ ಒಂದನ್ನು ಮಾತ್ರ ರಿಪೇರಿ ಮಾಡಲಾಗಿದೆಯಾದರು ಅದರಲ್ಲಿ ರಾಡಿ ನೀರು ಬರುತ್ತಿದ್ದು, ಕುಡಿಯಲು ಯೋಗ್ಯವಾದ ನೀರು ಸಿಗುತ್ತಿಲ್ಲ, ಕುಡಿಯುವ ನೀರಿಗಾಗಿ ಒಂದೂವರೆ ಕಿಮಿ ದೂರದಿಂದ ನೀರು ಹೊರಬೇಕಾಗಿದೆ ಈ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಲಾಗಿದ್ದರು ಗಮನ ಹರಿಸುತ್ತಿಲ್ಲ, ನೀರು ಪೂರೈಕೆಗೆ ಅಗತ್ಯವಿರುವ ವಿದ್ಯುತ್ ಟಿಸಿ ಗಳನ್ನು ಹಾಕಿಸುತ್ತಿಲ್ಲ, ಗ್ರಾಮದ ಹರಿಜನರ ಕಾಲೋನಿಯವರ ಹೆಸರಿನಲ್ಲಿ 500-600 ಉದ್ಯೋಗ ಖಾತ್ರಿ ಕರ್ಡುಗಳನ್ನು ಮಾಡಿಸಲಾಗಿದೆ ಆದರೆ ಅವುಗಳನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಘವೇಂದ್ರ ಇಟ್ಟುಕೊಂಡಿದ್ದಾರೆ,ನಮಗೆ ಇದುವರೆ ಉದ್ಯೋಗ ಸಿಕ್ಕಿಲ್ಲ, ನಮ್ಮ ಹೆಸರಿನಲ್ಲಿ ಜಾಬ್ ಕಾರ್ಡುಗಳನ್ನು ಮಾಡಿಸಿ ನಕಲಿ ಸಹಿ ಹಾಕಿ ಹಣ ಪಡೆಯಲಾಗುತ್ತಿದೆ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದ ಗ್ರಾಮಸ್ಥರು ುದ್ಯೋಗ ಖಾತ್ರಿ ಯೋಜನೆಯಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿದೆ, ಕಳಪೆ ಕಾಮಗಾರಿಗಳನ್ನು ಮಾಡಲಾಗುತ್ತಿದೆ, ಕೆಲವೆಡೆ ಕೆಲಸ ನಿರ್ವಹಿಸದೇ ಬಿಲ್ಲು ಮಾಡಲಾಗಿದೆ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ಗಂಡನೇ ನೀರು ಗಂಟಿಯಾಗಿದ್ದಾನೆ, ಆತನ ತಮ್ಮ ಅಟೆಂಡರ್ ಮತ್ತು ಕಾರ್ಯದರ್ಶಿ ಸೇರಿಕೊಂಡು ದಲಿತರನ್ನು ವಂಚಿಸುತ್ತಿದ್ದಾರೆ ಇವರ ವಿರುದ್ದ ತಕ್ಷಣ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು. ಸ್ಥಳಕ್ಕೆ ಭೇಟಿ ನೀಡಿದ್ದ ತಾಲೂಕು ಪಂಚಾಯಿತಿ ಅಧ್ಯಕ್ಷ ನಂಜುಂಡಾಚಾರ್ ಪ್ರತಿಭಟನಾ ಕಾರರ ಮನವಿ ಸ್ವೀಕರಿಸಿ ಸಮಸ್ಯೆ ಕುರಿತು 2ದಿನಗಳಲ್ಲಿ ಪರಿಹಾರ ಕೈಗೊಳ್ಳಲಾಗುವುದು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಜಾಬ್ ಕಾರ್ಡು ವಿತರಿಸಲು ಸೂಚಿಸುತ್ತೇನೆ ಎಂದರು. ಪ್ರತಿಭಟನೆಯ ನೇತೃತ್ವವನ್ನು ಗ್ರಾಮ ಪಂಚಾಯಿತಿ ಸದಸ್ಯ ರಂಗಸ್ವಾಮಿ ವಹಿಸಿದ್ದರು.

ಕಾಮೆಂಟ್‌ಗಳಿಲ್ಲ: