ಸೋಮವಾರ, ಫೆಬ್ರವರಿ 8, 2010

ವಿಶೇಷ ಘಟಕ ಶುರುವಾಗದ ಕೆಲಸ, ಕಾಂಗ್ರೆಸ್ ಪ್ರತಿಭಟನೆ


ಅರಕಲಗೂಡು: ಹೇಮಾವತಿ ಜಲಾಶಯ ಯೋಜನೆ ವ್ಯಾಪ್ತಿಯ ಹರಿಜನ ಕಾಲೋನಿಗಳಲ್ಲಿ ವಿಶೇಷ ಘಟಕ ಯೋಜನೆ(ಎಸ್ ಸಿ ಪಿ )ಕೆಲಸಕ್ಕೆ ಟೆಂಡರ್ ಆಗಿದ್ದರೂ ಕೆಲಸ ಮಾಡಿಸುವಲ್ಲಿ ಇಂಜಿನಿಯರುಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆಪಾದಿಸಿ ಗ್ರಾಮಸ್ಥರು ಶಾಸಕ ಎ. ಮಂಜು ನೇತೃತ್ವದಲ್ಲಿ ಗೊರೂರಿನ ಮುಖ್ಯ ಇಂಜಿನಿಯರ್ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಪ್ರಸಂಗ ಇಂದು ನಡೆಯಿತು.
ವಿಶೇಷ ಘಟಕ ಯೋಜನೆಯಡಿಯಲ್ಲಿ ಹರಿಜನ ಕಾಲೋನಿಗಳಿಗೆ ತಲಾ 7-8ಲಕ್ಷ ರೂಗಳಲ್ಲಿ ಮೂಲ ಸೌಕರ್ಯ ಅಭಿವೃದ್ದಿಗೆ ಅವಕಾಶವಿದೆ, ಈ ಕೆಲಸಗಳಿಗೆ ಟೆಂಡರು ಮಾಡಲಾಗಿದ್ದರೂ ಇಂಜಿನಿಯರುಗಳು ವರ್ಕ್ ಆರ್ಡರು ನೀಡದೇ ಕೆಲಸ ನಡೆಯುತ್ತಿಲ್ಲ, ಕಳೆದ ಕೆಲ ವರ್ಷಗಳಿಂದಲೂ ವಿಶೇಷ ಘಟಕ ಯೋಜನೆಯ ಹಣ ವಿನಿಯೋಗವಾಗದೇ ವಾಪಾಸಾಗುತ್ತಿದೆ. ಇದರಿಂದಾಗಿ ಪ.ಜಾ./ಪ.ವ. ಜನರಿಗೆ ಅನ್ಯಾಯವಾಗುತ್ತಿದೆ ಎಂದು ಶಾಸಕ ಎ ಮಂಜು ಆಪಾದಿಸಿದರು. ಅರಕಲಗೂಡು ತಾಲ್ಲೂಕಿನ 9ಹಳ್ಳಿಗಳಲ್ಲಿ ಕೆಲಸ ಆರಂಭಿಸಲು ಟೆಂಡರು ಪ್ರಕ್ರಿಯೆ ನಡೆಸಲಾಗಿದೆ ಆದರೆ ಅಲ್ಲಿ ಗುತ್ತಿಗೆದಾರರು ಕೆಲಸ ಮಾಡಿಲ್ಲ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿಲ್ಲ ಎಂದು ಮುಖ್ಯ ಇಂಜಿನಿಯರು ಸುದರ್ಶನರನ್ನು ತರಾಟೆಗೆ ತೆಗೆದುಕೊಂಡರು. ಒಂದು ಹಂತದಲ್ಲಿ ನೀವು ಗುತ್ತಿಗೆದಾರರ ಜೊತೆ ಶಾಮಿಲಾಗಿದ್ದೀರೇನ್ರಿ ? ಕೆಲಸ ಮಾಡದಿರುವ ುದ್ದೇಶವಾದರೂ ಏನು ಎಂದು ಪ್ರಶ್ನಿಸಿದರು. ನೀವು ಕೆಲಸ ಶುರುಮಾಡಿಸದಿದ್ದರೆ ನನ್ನ ತಾಲೂಕಿನ ಮತದಾರರಿಗೆ 1.50ಕೋಟಿರೂಪಾಯಿಗಳ ಻ಭಿವೃದ್ದಿ ಕೆಲಸದಿಂದ ವಂಚಿತರಾಗಬೇಕಾಗುತ್ತದೆ ಎಂದು ಹೇಳಿದರು. ಆಗ ಮುಖ್ಯ ಇಂಜಿನಿಯರು ಸುದರ್ಶನ್ ತಮ್ಮ ಅಧೀನ ಸಿಬ್ಬಂದಿಯಿಂದ ತಪ್ಪಾಗಿರುವುದು ನಿಜ ಎಂದು ಬೇಷರತ್ತಾಗಿ ಒಪ್ಪಿಕೊಂಡರಲ್ಲದೇ ತಕ್ಷಣವೇ ವರ್ಕ್ ಆರ್ಡರು ನೀಡಿ ಕೆಲಸ ಆರಭಿಸಲಾಗುವುದು, ಫೆಬ್ರುವರಿ 16ರಂದು ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಮಾಡಿಸಲಾಗುವುದು ಎಂದು ಭರವಸೆ ನೀಡಿದರು. ಫೆಬ್ರುವರಿ 16ರಂದು ಕೆಲಸ ಶುರುವಾಗದಿದ್ದರೆ ಫೆಬ್ರುವರಿ 17ರಂದು ಕಛೇರಿಗೆ ಬೀಗ ಹಾಕುವುದಾಗಿ ಎಚ್ಚರಿಸಿದ ಶಾಸಕರು ನಂತರ ಸ್ಥಳದಿಂದ ತೆರಳಿದರು. ಈ ಸಂಧರ್ಭದಲ್ಲಿ ಅರಕಲಗೂಡು ತಾಲ್ಲೂಕಿನ ಗ್ರಾಮಸ್ಥರು ಮುಖ್ಯ ಇಂಜಿನಿಯರ್ ಗೆ ಮನವಿ ಪತ್ರ ಅರ್ಪಿಸಿದರು. ಮುಖಂಡರಾದ ಚನ್ನಕೇಶವೇಗೌಡ, ಹಿರಣ್ಣಯ್ಯ, ರೇವಣ್ಣ ುಪಸ್ಥಿತರಿದ್ದರು.
ಅರಕಲಗೂಡು: 7.50ಕೋಟಿರೂ ವೆಚ್ಚದಲ್ಲಿ ಎಚ್ ಎನ್ ಪುರ-ಅರಕಲಗೂಡು ನಡುವನ ರಾಜ್ಯ ಹೆದ್ದಾರಿ ಜ್ಯಾಮಿತಿ ರಸ್ತೆ ಅಭಿವೃದ್ದಿ ನಡೆಯಲಿದೆ ಎಂದು ಶಾಸಕ ಎ. ಮಂಜು ಹೇಳಿದ್ದಾರೆ.

ಅರಕಲಗೂಡು-ಹೊಳೆನರಸಿಪುರ ನಡುವಿನ ರಾಜ್ಯ ಹೆದ್ದಾರಿ ಜ್ಯಾಮಿತಿ ಪರಿಮಿತಿ ಅಭಿವೃದ್ದಿ ಕಾಮಗಾರಿಗಳ ಭೂಮಿ ಪೂಜೆಯನ್ನು ಹೊಡಿಕೆ ಕಟ್ಟೆ ಬಳಿ ನೆರವೇರಿಸಿದ ಅವರು ಈ ರಸ್ತೆಗಾಗಿ ಜಮೀನು ಕಳೆದುಕೊಂಡವರಿಗೆ 45ಲಕ್ಷ ಪರಿಹಾರ ನೀಡಲಾಗುವುದು ಶೀಘ್ರವಾಗಿ ಕಾಮಗಾರಿ ಮುಗಿಸಲು ಸೂಚಿಸಲಾಗುವುದು ಎಂದರು. ತಾಲೂಕಿನಲ್ಲಿ ಜಲಾನಯನ ಯೋಜನೆಯಡಿ 4.85ಕೋಟಿ ಅಂದಾಜು ವೆಚ್ಚದಲ್ಲಿ ಬೂಮಿ ಸಮತಟ್ಟು ಮಾಡುವ ಯೋಜ಻ನೆ ಕೈಗೆತ್ತಿಕೊಳ್ಳಲಾಗುವುದು, ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು ಎಂದು ನುಡಿದ ಅವರು ಸ್ಥಳೀಯ ಜನ ಪ್ರತಿನಿಧಿಗಳು ಅಭಿವೃದ್ದಿ ಕೆಲಸದಲ್ಲಿ ರಾಜಕೀಯ ಮಾಡದೇ ಸಹಕರಿಸಿ ಎಂದು ಮನವಿ ಮಾಡಿದರು. 25ವರ್ಷಗಳಿಂದ ಡೈರಿ ಅಧ್ಯಕ್ಷರಾದವರು ಗ್ರಾಮಕ್ಕೆ ಒಂದು ಡೈರಿ ನೀಡಲಾಗದವರು ಜನರಿಗೆ ಇನ್ನೇನು ತಾನೆ ಮಾಡಿಯಾರು ಎಂದು ಮಾಜಿ ಸಚಿವ ರೇವಣ್ಣ ವಿರುದ್ದ ಕಟಕಿಯಾಡಿದರು. ಕಸಬಾ ಹೋಬಳಿಗೆ 3ಏತನೀರಾವರಿ ಯೋಜನೆ ಲಭಿಸಲಿದ್ದು ಬಜೆಟ್ ನಲ್ಲಿ ಅದು ಪ್ರಸ್ತಾಪವಾಗಲಿದೆ, ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ ಅದು ಅನುಷ್ಠಾನಗೊಂಡರೆ ಈ ಭಾಗದ ಜನರ ಬಹುದಿನದ ಕನಸು ನನಸಾಗುವುದು ಎಂದರು. ಕಾರ್ಯಕ್ರಮದಲ್ಲಿ ಮುಖಂಡರಾದ ಚನ್ನಕೇಶವೇಗೌಡ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಕೀರ್ತಿರಾಜ್, ಗಂಜಲಗೋಡು ಮಲ್ಲೇಶ್, ಗ್ರಾಮದ ದೇವರಾಜೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ: