ಬುಧವಾರ, ಫೆಬ್ರವರಿ 3, 2010
'ಶಿಸ್ತು ಸಂಯಮ ಪಾಲಿಸಿ' ಪಿ ಎನ್ ರಮೇಶ್
ಅರಕಲಗೂಡು:ವೃತ್ತಿ ಜೀವನದಲ್ಲಿ ಶಿಸ್ತು ಮತ್ತು ಸಂಯಮ ಪಾಲಿಸಿದರೆ ಯಶಸ್ಸು ಸಾಧ್ಯ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಹಾಗೂ ಟ್ರ್ಯಾಕ್ಸ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಪಿ ಎನ್ ರಮೇಶ್ ಹೇಳಿದ್ದಾರೆ. ಪಟ್ಟಣದಲ್ಲಿ ಇಂದು ನಡೆದ ಟ್ರ್ಯಾಕ್ಸ್ ಚಾಲಕರು/ಮಾಲೀಕರ ಸಂಘದ ವಾರ್ಷಿಕ ಸಭೆಯಲ್ಲಿ
ಮಾತನಾಡಿದ ಜೀವನದಲ್ಲಿ ಶಿಸ್ತು ಮುಖ್ಯ, ಕೇವಲ ದುಡಿಮೆಯಿಂದ ಸಾರ್ಥಕ ಬದುಕು ಸಾಧ್ಯವಿಲ್ಲ ಆದುದರಿಂದ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸಿ ಪ್ರಯಾಣಿಕರ ವಿಶ್ವಾಸ ಗಳಿಸಿ ಎಂದರು. ನಂತರ ನಡೆದ ಸಂಘದ ಕಾರ್ಯಕಾರಿ ಸಭೆಯಲ್ಲಿ ಸಂಘಕ್ಕೆ ಹೊಸದಾಗಿ ಸೇರ್ಪಡೆಯಾಗುವವರು ಕಡ್ಡಾಯವಾಗಿ ಡಿಪಾಸಿಟ್ ನೀಡಬೇಕು, ಎಲ್ಲಾ ವಾಹನಗಳ ಮಾಲೀಕರು ಮತ್ತು ಚಾಲಕರು ಸಂಘದ ಆರೋಗ್ಯ ನಿಧಿಗೆ ದೇಣಿಗೆ ನೀಡಬೇಕು ಎಂದರು. ಸಂಘದ ಕಾರ್ಯದರ್ಶಿ ಎ.ವಿ.ಪೃಥ್ವಿ ರಾಜ್ ಸಭೆಗೆ ಎಲ್ಲರನ್ನೂ ಸ್ವಾಗತಿಸಿದರು.ಹಿರಿಯ ವಕೀಲ ಜನಾರ್ಧನ ಗುಪ್ತ ಅವರನ್ನು ಸಂಘದ ಕಾನೂನು ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಕರುಣ, ಖಜಾಂಚಿ ರೇವಣ್ಣ, ಹಿರಿಯ ಮುಖಂಡರಾದ ಬರಗೂರು ಗಣೇಶ್, ಟ್ರ್ಯಾಕ್ಸ್ ಚಾಲಕರು ಮತ್ತು ಮಾಲೀಕರು ಸಕ್ರಿಯವಾಗಿ ಸಭೆಯಲ್ಲಿ ಪಾಲ್ಗೊಂಡು ಸಲಹೆ,ಸಹಕಾರ ನೀಡಿದರು.
ಅಭಿನಂದನೆ: ಅರಕಲಗೂಡು ಪಟ್ಟಣದ ಕುಡಿಯುವ ನೀರಿನ ಯೋಜನೆಗಾಗಿ ರಾಜ್ಯ ಸರ್ಕಾರ 10.46ಕೋಟಿ ರೂಗಳನ್ನು ಮಂಜೂರು ಮಾಡಿರುವುದಕ್ಕೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ನಟರಾಜ್ ಮತ್ತು ಕಾರ್ಯದರ್ಶಿ ಕೇಶವೇಗೌಡ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಹಲವಾರು ಭಾರಿ ನಿಯೋಗ ತೆರಳಿ ಮುಖ್ಯಮಂತ್ರಿ ಯಡೆಯೂರಪ್ಪನವರ ಗಮನ ಸೆಳೆದಿದ್ದರು, ಆದ್ದರಿಂದ ಮುಖ್ಯ ಮಂತ್ರಿಗಳು ವಿಶೇಷ ನುದಾನ ಬಿಡುಗಡೆ ಮಾಡಿದ್ದಾರೆ ಸರ್ಕಾರಕ್ಕೆ ಅಭಿನಂದನೆಗಳು ಎಂದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ