ಅರಕಲಗೂಡು: ತಾಲ್ಲೂಕು ಬಿಜೆಪಿ ಅಧ್ಯಕ್ಷರ ಆಯ್ಕೆ ಸಂಧರ್ಬದಲ್ಲಿ ಗದ್ದಲ-ಕೋಲಾಹಲ ಉಂಟಾಗಿ ಕೈ ಕೈ ಮಿಲಾಯಿಸಿದ ಪ್ರಸಂಗ ಇಂದು ಪಟ್ಟಣದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ನಡೆಯಿತು. ತಾಲೂಕು ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಇಂದು ಚುನಾವಣೆ ನಿಗದಿಯಾಗಿತ್ತು. ಕಾರ್ಯಕ್ರಮ ಏರ್ಪಾಟಾಗಿದ್ದ ಶ್ರೀ ಚನ್ನಬಸವೇಶ್ವರ ಕಲ್ಯಾಣ ಮಂಠಪಕ್ಕೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಕೊಡಗಿನ ಬಿಜೆಪಿ ಮುಖಂಡ ಮೇದಪ್ಪ ಸಭೆಯಲ್ಲಿ ಚುನಾವಣ ಪ್ರಕ್ರಿಯೆಯನ್ನು ಘೋಷಿಸಿ ಪಕ್ಷದ ಬಲವರ್ದನೆಗೆ ಕಾರ್ಯಕರ್ತರು ಶ್ರಮಿಸಬೇಕು ಈ ನಿಟ್ಟಿನಲ್ಲಿ ಸಮರ್ಥರನ್ನು ಆಯ್ಕೆ ಮಾಡುವಂತೆ ಕರೆ ನೀಡಿದರು. ಹಾಗೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ 13ಮಂದಿ ಉತ್ಸುಕರಿದ್ದಾರೆ ಎಂದು ತಿಳಿಸಿದ ಅವರು ಎಲ್ಲರೂ ಒಮ್ಮತದ ತೀರ್ಮಾನಕ್ಕೆ ಬಂದು ಒಬ್ಬ ವ್ಯಕ್ತಿಯನ್ನು ಅಂತಿಮಗೊಳಿಸಬೇಕೆಂದು ಮನವಿ ಮಾಡಿದರು. ನಂತರ ಚುನಾವಣಾಧಿಕಾರಿಗಳು ಮತ್ತು ಮುಖಂಡರು ಕೆಲವು ಮಂದಿ ಆಕಾಂಕ್ಷಿಗಳನ್ನು ಕರೆದುಕೊಂಡು ವೇದಿಕೆ ಹಿಂದಿನ ಕೊಠಡಿಗೆ ತೆರಳಿದ್ದು ಹೊರಗೆ ಉಳಿದಿದ್ದ ಅಭ್ಯರ್ಥಿಗಳನ್ನು ಕೆರಳಿಸಿತು. ಬಿಜೆಪಿಯಲ್ಲಿ ಮುಕ್ತವಾಗಿ ಚುನಾವಣೆ ನಡೆಸುತ್ತಿಲ್ಲ, ಚುನಾವಣೆ ಕ್ರಮವನ್ನೆ ಸರಿಯಾಗಿ ತಿಳಿಸಿಲ್ಲ, ತಮಗೆ ಬೇಕಾದವರನ್ನು ಸ್ಥಾಯಿ ಸಮಿತಿ ಸದಸ್ಯರನ್ನಾಗಿ ಮಾಡಿಕೊಂಡು ಅವರ ಮೂಲಕ ಬೇಕಾದವರನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಐಯ್ಯಣ್ಣ ಗೌಡ ಮತ್ತು ಶಿವಲಿಂಗ ಶಾಸ್ತ್ರಿ ಆರೋಪಿಸಿದಾಗ ರೊಚ್ಚಿಗೆದ್ದ ಇತರೆ ಕಾರ್ಯಕರ್ತರು ನೂಕಾಟ-ತಳ್ಳಾಟ ಆರಂಭಿಸಿದರು. ಅಧ್ಯಕ್ಷ ಸ್ಥಾನದ ತೃಪ್ತರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದಾಗ ಕೆಲ ಕಾರ್ಯರ್ತರು ಅಡ್ಡಿಪಡಿಸಲು ಯತ್ನಿಸಿದರು ಈ ಹಂತದಲ್ಲಿ ಬಿಜೆಪಿ ಅಧ್ಯಕ್ಷ ರೊಂದಿಗೆ ಅತೃಪ್ತರು ನೇರವಾಗಿಯೇ ಮಾತಿನ ಚಕಮಕಿ ನಡೆಸಿದರಲ್ಲದೇ ಬಿಜೆಪಿಯ ಅಂತರಂಗವನ್ನು ಬಯಲುಗೊಳಿಸಲೆತ್ನಿಸಿದರು. ಇದರಿಂದ ಕ್ರುದ್ದರಾದ ಕೆಲ ಕಿಡಿಗೇಡಿಗಳು ಅತೃಪ್ತರ ಮೇಲೆ ಹಲ್ಲೆ ನಡೆಸಲು ಯತ್ನಿಸಿದರಲ್ಲದೇ ಸಭಾಂಗಣದಿಂದಲೇ ಆಚೆಗಟ್ಟಿದರು. ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾ ಬಿಜೆಪಿ ಅದ್ಯಕ್ಷ ನವಿಲೆ ಅಣ್ಣಪ್ಪ ಈ ಹಿಂದೆ ಪಕ್ಷ ಸಂಘಟಿಸುವಾಗ ಇಲ್ಲದವರು ಈಗ ಪಕ್ಷ ಅಧಿಕಾರದಲ್ಲಿರುವುದರಿಂದ ಲಾಭದ ಆಸೆಗೆ ಗೋಂದಲ ಸೃಷ್ಟಿಸುತ್ತಿದ್ದಾರೆ ಇದೆಲ್ಲ ಸಹಜವಾಗಿದೆ ಎಂದರು. ಅಂತಿಮವಾಗಿ ಸರ್ವಸಮ್ಮತ ಅಂತಿಮವಾಗಿ ಸರ್ವ ಸಮ್ಮತ ಆಯ್ಕೆಯ ಅಧ್ಯಕ್ಷರನ್ನಾಗಿ ಹಳ್ಳಿಮೈಸೂರಿನ ನಟರಾಜ್ ರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಯಿತು. ಉಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ಕೇಶವೇಗೌಡ, ಪ್ರತಿನಿಧಿಗಳಾಗಿ ಶಿವಲಿಂಗ ಶಾಸ್ತ್ರಿ, ಕುಮಾರಸ್ವಾಮಿಯನ್ನು ಆಯ್ಕೆ ಮಾಡಲಾಯಿತು. ಈ ಪ್ರಕಟಣೆ ಹೊರಬೀಳುತ್ತಿದ್ದಂತೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಐಯ್ಯಣ್ಣಗೌಡ ಸಭೆಯಿಂದ ಹೊರನೆಡೆದರು ಅವರನ್ನು ಅವರ ಬೆಂಬಲಿಗರು ಹಿಂಬಾಲಿಸಿದರು. ವೇದಿಕೆಯಲ್ಲಿದ್ದ ಹೊಳೆನರಸೀಪುರದ ತಾ.ಪಂ. ಸದಸ್ಯ ಚಂದ್ರಶೇಖರ್ ಸಹಾ ಆಯ್ಕೆಯಲ್ಲಿ ಕುರುಬ ಸಮಾಜದ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿದೆ ಎಂದು ಅತೃಪ್ತಿ ವ್ಯಕ್ತ ಪಡಿಸಿ ಬೆಂಬಲಿಗರೊಂದಿಗೆ ತೆರಳಿದರು. ಗೋಂದಲದ ಗೂಡಾಗಿದ್ದ ವೇದಿಕೆಯಲ್ಲಿ ತರಾತುರಿಯಲ್ಲಿ ನಿಕಟಪೂರ್ವ ಅಧ್ಯಕ್ಷ ನಟೇಶ್ ಕುಮಾರ್ ನೂತನ ಅಧ್ಯಕ್ಷ ನಟರಾಜ್ ಗೆ ಅಧಿಕಾರ ಹಸ್ತಾಂತರಿಸಿದರು. ವೇದಿಕೆಯಲ್ಲಿ ಮುಖಂಡರಾದ ರವಿಕುಮಾರ್, ಲೋಹಿತ್ ಕುಂದೂರು, ಭುವನಾಕ್ಷ, ನಾರಾಯಣ, ನಂಜುಂಡೇಗೌಡ, ಮಧುಕರ್ ಮತ್ತಿತರರು ಉಪಸ್ಥಿತರಿದ್ದರು.
ಸೋಮವಾರ, ಡಿಸೆಂಬರ್ 28, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ