ಶುಕ್ರವಾರ, ಜನವರಿ 7, 2011

ಎ ಟಿ ರಾಮಸ್ವಾಮಿಗೆ ಮಾತೃ ವಿಯೋಗ


ಅರಕಲಗೂಡು: ಬೆಂಗಳೂರು ಅಕ್ರಮ ಭೂ ಒತ್ತುವರಿ ಪತ್ತೆ ಜಂಟಿ ಸದನ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ ಟಿ ರಾಮಸ್ವಾಮಿಯವರ ಮಾತೃಶ್ರೀ ಕಾಳಮ್ಮ (93) ಶುಕ್ರವಾರ ಬೆಳಿಗ್ಗೆ ಬಿಸಲಹಳ್ಳಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಅವರು ಅನಾರೋಗ್ಯ ಪೀಡಿತರಾಗಿದ್ದು ಚೇತರಿಸಿಕೊಳ್ಳುತ್ತಿದ್ದರು ಆದರೆ ಇಂದು ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆ ಬಿಸಲಹಳ್ಳಿಯಲ್ಲಿರುವ ಎ ಟಿ ರಾಮಸ್ವಾಮಿಯವರ ತೋಟದಲ್ಲಿ ಜರುಗಿತು. ಜೆಡಿಎಸ್ ಮುಖಂಡರಾದ ಎಚ್ ಕೆ ಜವರೇಗೌಡ,ಜೆ ಡಿಎಸ್ ತಾಲ್ಲೂಕು ಅಧ್ಯಕ್ಷ ಎಂ ಸಿ ರಂಗಸ್ವಾಮಿ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಎಸ್ ದ್ಯಾವೇಗೌಡ, ಹೇಮಾವತಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸತೀಶ್, ತಾ.ಪಂ. ಅಧ್ಯಕ್ಷ ರಾದ ಎಚ್  ಮಾದೇಶ್, ಕಾಂಗ್ರೆಸ್ ಮುಖಂಡ ಕಬ್ಬಳಿಗೆರೆ ಬೈರೇಗೌಡ, ಮುಖಂಡರಾದ ಸರಗೂರು ಚೌಡೇಗೌಡ, ಪೊಟ್ಯಾಟೊ ಕ್ಲಬ್ ನ ಯೋಗಾರಮೇಶ್ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಎಟಿಆರ್ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು  ಮತ್ತಿತರರು ಮೃತರ ಅಂತಿಮ ದರ್ಶನ ಪಡೆದರು.ಮೃತರು ಮಾಜಿ ಶಾಸಕ ಎ ಟಿ ರಾಮಸ್ವಾಮಿ ಹಾಗೂ ಅಪಾರ ಬಂದುಗಳನ್ನು ಅಗಲಿದ್ದಾರೆ.

1 ಕಾಮೆಂಟ್‌:

ವಿ. ಭೂಮಿಕಾ ಹೇಳಿದರು...

ಎಟಿಆರ್ ತಾಯಿಯವರು ಎಂದು ನಿಧನರಾದರೆಂದು ತಿಳಿಯಲಿಲ್ಲ..ಎಟಿಆರ್ ಕುಟುಂಬಕ್ಕೆ ದು:ಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತನು ನೀಡಲಿ