ಮಂಗಳವಾರ, ಆಗಸ್ಟ್ 4, 2009

ಮರಬೆಳೆಸಿದರೆ ರೈತರ ಆತ್ಮಹತ್ಯೆ ತಡೆಯಬಹುದು-ಯೋಗಾರಮೇಶ್


ಅರಕಲಗೂಡು: ಬೆಳೆ ನಾಶದಿಂದ ಬೇಸತ್ತ ರೈತ ಸಾಯುವುದನ್ನು ಮರಬೆಳೆಯುವುದರಿಂದ ತಪ್ಪಿಸಬಹುದು ಎಂದು ಸಮಾಜ ಸೇವಕರಾದ ಯೋಗಾರಮೇಶ್ ಹೇಳಿದ್ದಾರೆ.
ಪರಿಸರ ಜಾಗೃತಿ ಮೂಡಿಸಲುತಾಲ್ಲೂಕಿನ ಹೊಳಲಗೋಡು ಗ್ರಾಮದಲ್ಲಿ 10ಸಾವಿರ ವಿವಿಧ ಜಾತಿಯ ಸಸಿಗಳನ್ನುಉಚಿತವಾಗಿ ವಿತರಿಸಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ರೈತರ ಆತ್ಮಹತ್ಯೆ ಸೋಂಕು ರೋಗದಂತಾಗಿದೆ, ಸರ್ಕಾರಗಳು ರೈತರ ನೆರವಿಗೆ ಧಾವಿಸುತ್ತಿಲ್ಲ, ಸೂಕ್ತ ಸಮಯದಲ್ಲಿ ರೈತರಿಗೆ ಮಾರ್ಗದರ್ಶನ ಸಿಗುತ್ತಿಲ್ಲ ೆಂದು ವಿಷಾದಿಸಿದರು. ರೈತರು ತಮ್ಮ ಜಮೀನಿನ ಸುತ್ತ ಸಸಿ ಬೆಳೆಸಿದಲ್ಲಿ ಅದು ಅವರನ್ನು ಕಾಯುತ್ತದೆ, ಆಗ ಬೆಳೆ ನಷ್ಟವಾಯಿತೆಂದು ಯಾರು ಸಾಯಬೇಕಿಲ್ಲ, ಗಿಡ ಬೆಳೆಸುವುದು ಸಾಮಾಜಿಕ ಚಳುವಳಿಯಾಗಬೇಕು. ಒಂದು ಧೇಶದ ಅರಣ್ಯ ಸಂಪತ್ತು ಆ ದೇಶದ ಾರ್ಥಿಕತೆಯ ಬೆನ್ನೆಲುಬಾಗಿರುತ್ತದೆ ಎಂದು ನುಡಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಉಪನ್ಯಾಸಕಿ ಅನಸೂಯ ಜನಪದರ ಜೀವನದಲ್ಲಿ ಗಿಡ, ಮರಗಳಿಗೆ ಅದರದ್ದೆ ಆದ ಆದ್ಯತೆಯನ್ನು ನೀಡಲಾಗಿದೆ, ಕಾಲಾನಂತರದಲ್ಲಿ ಹಳ್ಳಿಗಳಲ್ಲಿ ಆಧುನೀಕರಣ ಪೃಕೃತಿಯ ನಾಶಕ್ಕೆ ಕಾರಣವಾಗಿದೆ, ಪರಿಣಾಮ ಕೃಷಿಯ ಮೇಲೆ ಆಗುತ್ತಿದೆ, ಮಳೆ-ಬೆಳೆ ನಿಗದಿತ ಸಮಯಕ್ಕೆ ಆಗುತ್ತಿಲ್ಲ ಆದ್ದರಿಂದ ಗಿಡಮರಬೆಳೆಸಿ ಬದುಕನ್ನು ಪಾವನವಾಗಿಸಿಕೊಳ್ಳಿ ಎಂದರು. ಆಶೀರ್ವಚನ ನೀಡಿ ಮಾತನಾಡಿದ ದೊಡ್ಡಮಠದ ಶ್ರೀ ಮಲ್ಲಿಕಾರ್ಜುನಸ್ವಾಮೀಜಿ ಪೃಕೃತಿ ದೇವರ ಸಮಾನ, ಮರ-ಗಿಡಗಳ ಬದುಕಿನ ಆಸರೆಯಾಗುತ್ತವೆ, ಕೃಷಿಗೆ ಆದಯತೆ ಕೊಟ್ಟಷ್ಟು ಮರಗಿಡ ಬೆಳೆಸಲು ಕಷ್ಠ ಪಡಬೇಕಿಲ್ಲ ಆದ್ದರಿಮದ ಜಾಗೃತರಾಗಿ ಮನುಕುಲಕ್ಕೆ ಒಳಿತಾಗುವ ಪೃಕೃತಿ ಕೊಡುಗೆ ನೀಡಿ ಎಂದರು. ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ ಹುಲುಕೋಡಯ್ಯ,ಮುಖಂಡರಾದ ಬೊಮ್ಮೇಗೌಡ, ರೈತಸಂಘದ ಹೊ ತಿ ಹುಚ್ಚಪ್ಪ, ಗ್ರಾ.ಪಂ. ಅಧ್ಯಕ್ಷರಾದ ಬಸವರಾಜು, ವಕೀಲ ಸತ್ಯನಾರಾಯಣ ುಪಸ್ಥಿತರಿದ್ದರು. ಹೊಳಲಗೋಡು ಮತ್ತು ಸುತ್ತಮುತ್ತಲ ಗ್ರಾಮಗಳ ರೈತರಿಗೆ ಸಸಿಗಳನ್ನು ವಿತರಿಸಲಾಯಿತು. ಮುಂದಿನ ವಾರ ಮಲ್ಲಿಪಟ್ಟಣ ಹೋಬಳಿಯ ಆಲದಹಳ್ಳಿ ಗ್ರಾಮದಲ್ಲಿ ಗಿಡ ವಿರಿಸಲಾಗುವುದು, ಗಿಡಬೆಳೆಸುವ ಆಂಧೋಲನವನ್ನು ಈ ಮೂಲಕ ತಾಲ್ಲೂಕಿನಾಧ್ಯಂತ ನಡೆಸಲಾಗುತ್ತಿದೆ. ಪರಿಸರ ಜಾಗೃತಿ ಇದರ ಉದ್ದೇಶ ಎಂದು ಯೋಗಾರಮೇಶ್ ಪತ್ರಿಕೆಗೆ ತಿಳಿಸಿದರು.

ಕಾಮೆಂಟ್‌ಗಳಿಲ್ಲ: