ಶನಿವಾರ, ಜೂನ್ 13, 2009

ದರೋಡೆ, ಕಗ್ಗೊಲೆ ಮಾಡಿ ಕಾರು ಕದ್ದರು ಮೀಸೆ ಮೂಡದ ಈ ಹುಡುಗರು

ಅರಕಲಗೂಡು: ಬೆಂಗಳೂರು ಐಟಿಪಿಎಲ್ ಕಾಲ್ ಸೆಂಟರ್ ಕಾರು ಚಾಲಕನೋರ್ವನ್ನನ್ನು ಕಾರು ಸಮೇತ ಅಪಹರಿಸಿ ಕೊಲೈಗೈದು ಹೂತು ಹಾಕಿದ ಘಟನೆ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಬಳಿಯ ಕೆರೆಕೋಡಿ ಬಳಿ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ತೊಣಚಗೊಂಡನಹಳ್ಳಿ ಗ್ರಾಮದ ನಂಜುಂಡಪ್ಪನ ಮೊದಲ ಪುತ್ರ ನವೀನ್ ಕುಮಾರ್ (೨೨) ಎಂಬಾತ ಕಳೆದ 2ವರ್ಷ ಗಳ ಹಿಂದೆ ಬೆಂಗಳೂರು ಸೇರಿಕೊಂಡಿದ್ದ, ಎಸ್ ಎಸ್ ಎಲ್ ಸಿ ಗೆ ಓದು ನಿಲ್ಲಿಸಿದ್ದ ನವೀನ ಚಾಲನೆ ಕಲಿತು ಬೆಂಗಳೂರಿನ ಆಸ್ಪತ್ರೆಯೊಂದರ ಅಂಬ್ಯುಲೆನ್ಸ್ ಗೆ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಅದೇನಾಯ್ತೊ ಗೊತ್ತಿಲ್ಲ ಅಲ್ಲಿನ ಉದ್ಯೋಗ ಬಿಟ್ಟು ಐ ಟಿ ಪಿ ಎಲ್ ಕಾಲ್ ಸೆಂಟರ್ ಗೆ ಕ್ವಾಲಿಸ್ ವಾಹನ ಚಾಲಕನಾಗಿ ಕಳೆದ 15ದಿನಗಳ ಹಿಂದೆಯಷ್ಟೇ ಸೇರಿಕೊಂಡಿದ್ದ. ಅದು ಫ್ರೇಜರ್ ಟೌನ್ ನಲ್ಲಿರುವ ಬಾಲರಾಜ್ ಎಂಬುವವನಿಗೆ ಸೇರಿದ ಕ್ಯಾಬ್ ಸರ್ವೀಸ್ ಸೆಂಟರ್ ನ ಕ್ವಾಲೀಸ್ ಆಗಿತ್ತು. ಬೆಂಗಳೂರಿನ ಸುಂಕದ ಕಟ್ಟೆ ಯಲ್ಲಿ ನಾಲ್ಕೈದು ಮಂದಿ ಗೆಳೆಯರೊಂದಿಗೆ ಸೇರಿ ರೂಮು ಮಾಡಿಕೊಂಡಿದ್ದ ನವೀನ ಕುಮಾರ್ ಮೇ. ೨೪ ರ ರಾತ್ರಿ 9ಗಂಟೆ ಸುಮಾರಿಗೆ ಕರ್ತವ್ಯಕ್ಕೆ ಹಾಜರಾಗಲು ಹೊರಟು ನಿಂತ.ಅಂದು ಅವನ ನಸೀಬು ಕೆಟ್ಟಿತ್ತು ಎನಿಸುತ್ತೆ, ಸಿಟಿ ಮಧ್ಯೆ ಬರುವಾಗ 2ಮಂದಿ ಕೈತೋರಿಸಿ (ಪ್ರಯಾಣಿಕರಂತೆ ನಟಿಸಿ) ಹತ್ತಿಕೊಂಡಿದ್ದಾರೆ ಇನ್ನೂ ಸ್ವಲ್ಪ ಮುಂದೆ ಬಂದಾಗ ಇನ್ನೂ 3ಮಂದಿ ಜೊತೆಯಾಗಿದ್ದಾರೆ. 5ಮಂದಿ ಒಟ್ಟಾಗುತ್ತಿದ್ದಂತೆ ಚಾಲಕ ನವೀನನಿಗೆ ಬೆದರಿಸಿ ಹಿಂದೆ ಕೂರಿಸಿ ಕೊಂಡು ಕಾರು ಚಾಲನೆ ಮಾಡಿದ್ದಾರೆ. ರಸ್ತೆಯ ಮಧ್ಯೆ ಸಿಕ್ಕೆ ಪೆಟ್ರೋಲ್ ಬಂಕ್ ಒಂದರಲ್ಲಿ ಇಂದನ ಹಾಕಿಸಿಕೊಂಡು ದುಡ್ಡು ಕೊಡದೇ ಪರಾರಿಯಾಗಿದ್ದಾರೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಣ್ಣಪುಟ್ಟ ಕಳ್ಳತನ, ಸರಣಿ ದರೋಡೆ ಮಾಡಿದ ಪಾತಕಿಗಳು ನಂತರ ಹಾಸನ ಜಿಲ್ಲೆಯ ಻ರಕಲಗೂಡು ತಾಲ್ಲೂಕಿನ ಕಾರಹಳ್ಳಿ ಎಂಬ ಗ್ರಾಮಕ್ಕೆ ಬಂದಿಳಿದಿದ್ದಾರೆ. ಅಲ್ಲಿ ಪಾತಕಿಯೊಬ್ಬನ ಮನೆಯಲ್ಲಿ ಉಳಿದು ಮಾಂಸದ ಅಡುಗೆ ಮಾಡಿಸಿ ಉಂಡಿದ್ದಾರೆ... ಈ ನಡುವೆ ಗುಂಡು ಏರಿಸಿದ್ದಾರೆ. ಜೊತೆಯಲ್ಲಿದ್ದ ಕಾರು ಚಾಲಕನಿಗೂ ಗುಂಡು ಹಾಕಿಸಿದ್ದಾರೆ. ನಂತರ ಅವನನ್ನು ಬಿಟ್ಟು ಕಳುಹಿಸುವ ಮನಸ್ಸು ಮಾಡಿದ್ದಾರೆ. ಆದರೆ ಚಾಲಕನ ದುರಾದೃಷ್ಟ ಅವನು ದುಷ್ಕರ್ಮಿಗಳು ಬಂದ ಹಾದಿ, ಉಳಿದ ಮನೆ, ಊರು ತೋರಿಸುತ್ತಾನೆ ಆಗ ತಮಗೆ ಉಳಿಗಾಲವಿಲ್ಲ ಎಂಬುದು ಗೊತ್ತಾಗಿದೆ, ಆಗ ಆತನನ್ನು ಕೊಲೆಗೈದು ಕಾರು ಅಪಹರಿಸಲು ನಿರ್ಧರಿಸಿದ್ದಾರೆ. ಅದರಂತೆ ಬಹುಶ ಮೇ 25ರಂದು ಆತನ ಮರ್ಮಾಂಗಕ್ಕೆ ಒದ್ದು, ಕುತ್ತಿಗೆ ಬಿಗಿದು ಕೊಲೆಗೈದಿದ್ದಾರೆ. ನಂತರ ಮಧ್ಯರಾತ್ರಿ ವೇಳೆಗೆ ಅರಕಲಗೂಡಿನಿಂದ 16ಕಿಮಿ ದೂರವಿರುವ ದೊಡ್ಡಮಗ್ಗೆ ಬಳಿಯ ಕೆರೆಕೋಡಿ ಬಳಿಗೆ ಬಂದು ಗುಂಡಿ ತೆಗೆದು ಆತನ ಶವವನ್ನು ಹೂತು ಹಾಕಿದ್ದಾರೆ. ನಂತರ ಅರಕಲಗೂಡು ಕಡೆ ಬಂದ ದುಷ್ಕರ್ಮಿಗಳು ರಾತ್ರಿ 11ಗಂಟೆ ಸುಮಾರಿಗೆ ಬೆಂಗಳೂರಿನಿಂದ ಻ರಕಲಗೂಡಿಗೆ ಬಂದು ಬರಗೂರು ಗ್ರಾಮಕ್ಕೆ ತೆರಳಲು ಬಸ್ ಕಾಯುತ್ತಿದ್ದ ಬಿಎಂಟಿಸಿ ಚಾಲಕ ಶಂಕರ್ ನನ್ನು ಡ್ರಾಪ್ ಮಾಡುವುದಾಗಿ ಹತ್ತಿಸಿ ಕೊಂಡಿದ್ದಾರೆ. ನಂತರ ಬಿದಿರುಮೆಳೆ ಕೊಪ್ಪಲು ಗ್ರಾಮದ ಬಳಿಗೆ ಕರೆದೊಯ್ದು ಹಲ್ಲೆ ನಡೆಸಿ ಆತನ ಬಳಿಯಿದ್ದ ಉಂಗುರ, ಚೈನು, ನಗದು ೧೮೦೦೦ ಮೊತ್ತವನ್ನು ದೋಚಿದ್ದಾರೆ, ಆತನ ಜೇಬಿನ್ಲಲಿ ಎಟಿಎಂ ಸಿಕ್ಕಿದಾಗ ವಾಪಸ್ ಗೊರೂರು ರಸ್ತೆಗೆ ಬಂದು ಗೊರೂರಿನ ಎಟಿಎಂ ನಲ್ಲಿ 1400ರೂಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ಮುಂದೆ ಆತನ್ನನ್ನು ಕಟ್ಟಾಯ ಸಮೀಪದ ಜಿನ್ನೇನಹಳ್ಳಿ ಬಳಿ ಇಳಿಸಿ ಬಯಲು ಪ್ರದೇಶದಲ್ಲಿ ಓಡುವಂತೆ ತಿಳಿಸಿದ್ದಾರೆ. ಪ್ರಾಣ ಭಯದಿಂದ ಆತ ಓಡಿಹೋಗಿದ್ದಾನೆ. ಮುಂದೆ ಹಾದಿಯಲ್ಲಿ ಸಿಕ್ಕವರನ್ನೇಲ್ಲ ದೋಚಿಕೊಂಡು ಹೋದ ದುಷ್ಕರ್ಮಿಗಳು ಚನ್ನರಾಯಪಟ್ಟಣ ಬಳಿ ಬಸ್ ಚಾಲಕನೋರ್ವ ನನ್ನು ದೋಚಿದ್ದಾರೆ. ಆಗ ದಾಖಲಾದ ದೂರಿನ ಸುಳಿವು ಅನುಸರಿಸಿ ಮಂಡ್ಯದ ಸರ್ಕಲ್ ಇನ್ಸ್ಪೆಕ್ಟರ್ ಜಯಮಾರುತಿ ತನಿಖೆಗೆ ಮುಂದಾಗಿದ್ದಾರೆ. ಇದೇ ವೇಳೆ ಇದೇ ದುಷ್ಖರ್ಮಿಗಳು ಪಾಂಡವಪುರದಲ್ಲಿಯೂ ಒಬ್ಬನ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಂಡು ಹೊಗಿದ್ದಾರೆ. ಸದರಿ ಮೊಬೈಲ್ ನ ಸುಳಿವು ಬೆನ್ನು ಬಿದ್ದ ಸಿಪಿಐ ಜಯಮಾರುತಿ ತನಿಖೆಗೆ ಮುಂದಾಗಿದ್ದಾರೆ. ಆಗಿ ಸಿಕ್ಕಿ ಬಿದ್ದವರೇ ಕೊಪ್ಪದ ಯೋಗೇಶ, ರಾಮನಗರದ ಹರೀಶ್ ಮತ್ತು ಪೀನ್ಯ ದ ಮಂಜುನಾಥ್. ಅವರನ್ನು ಏರೋಪ್ಲೇನ್ ಹತ್ತಿಸಿದ ಮೇಲೆ ಪಾಪಿಗಳು ತಾವು ಮಾಡಿದ ಒಂದೊಂದೆ ಪಾತಕಗಳನ್ನು ಬಾಯಿ ಬಿಟ್ಟಿದ್ದಾರೆ. ಆಗ ನವೀನ ಕುಮಾರನ ಕೊಲೆ ಬಯಲಾಗಿದೆ. ಇನ್ನು ಇಬ್ಬರು ಆರೋಪಿಗಳಾದ ಕಾರಹಳ್ಳಿ ಗ್ರಾಮದ ಕಾಂತ, ಹಾಸನದ ಕುಮಾರ ಕ್ವಾಲೀಸ್ ವಾಹನದೊಂದಿಗೆ ನಾಪತ್ತೆಯಾಗಿದ್ದಾರೆ. ಜೂನ್ 10ರಂದು ಆರೋಪಿಗಳನ್ನು ಬಂಧಿಸಲಾಗಿದೆ. ಜಿಲ್ಲೆಯ ವಿವಿದೆಡೆ ಕಳೆದ ಒಂದು ವಾರದಲ್ಲಿ ನಡೆದಿದೆಯೆನ್ನಲಾದ ಹಲವು ದರೋಡೆ ಪ್ರಕರಣದಲ್ಲೂ ಸದರಿ ಆರೋಪಿಗಳು ಭಾಗಿಯಾಗಿರುವ ನಿರೀಕ್ಷೆಯಿದೆ. ಜಿಲ್ಲೆಯ ಪ್ರಕರಣಕ್ಕೆ ಸಂಭಂದಿಸಿದಂತೆ ಸದರಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವುದಾಗಿ ಅರಕಲಗೂಡು ಸರ್ಕಲ್ ಇನ್ಸ್ಪೆಕ್ಟರ್ ಜಗದೀಶ್ ಪತ್ರಿಕೆಗೆ ತಿಳಿಸಿದ್ದಾರೆ. ಈ ಸಂಧರ್ಭ ಪತ್ರಿಕೆಯೊಂದಿಗೆ ಮಾತನಾಡಿದ ಸರ್ಕಲ್ ಇನ್ಸ್ಪೆಕ್ಟರ್ ಜಯಮಾರುತಿ ಪ್ರಯಾಣಿಕರು ರಾತ್ರಿ ವೇಳೆ ಸರ್ಕಾರಿ ವಾಹನ ಹೊರತು ಪಡಿಸಿ ಖಾಸಗಿ ಮತ್ತು ಅಪರಿಚಿತ ವಾಹನಗಳಲ್ಲಿ ಹತ್ತ ಬಾರದೆಂದು ಮನವಿ ಮಾಡಿದ್ದಾರೆ. ಆರೋಪಿಗಳು ಬೆಂಗಳೂರಿನ್ಲಲಿ ಪಾನಿಪೂರಿ ಮತ್ತಿತರೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದು ದುಡ್ಡು ಮಾಡುಬ ಹಪಾಹಪಿಗೆ ಬಿದ್ದು ಈ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆನ್ನಲಾಗಿದೆ. ತನಿಖೆ ಪ್ರಗತಿಯಲ್ಲಿದೆ.